Tuesday, January 21, 2025
ಸುದ್ದಿ

ಮಾನಸಿಕ ಆಘಾತದಿಂದ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ನಿವೃತ್ತ ಅರ್ಚಕ ಆತ್ಮಹತ್ಯೆ – ಕಹಳೆ ನ್ಯೂಸ್

ವಿಟ್ಲ: ಮಾನಸಿಕ ಆಘಾತದಿಂದ ವ್ಯಕ್ತಿಯೊಬ್ಬರು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ವಿಟ್ಲ ದೇವಸ್ಥಾನದ ಬಳಿ ನಡೆದಿದೆ.

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನಿವೃತ್ತ ಅರ್ಚಕ ವಾಸುದೇವ ಕೆದಿಲಾಯ (84) ಮೃತ ವ್ಯಕ್ತಿಯಾಗಿದ್ದಾರೆ. ಸೋಮವಾರ ರಾತ್ರಿ ಯಾವುದೇ ಸಮಸ್ಯೆ ಇಲ್ಲದೆ ಮಲಗಿದ್ದು, ಬೆಳಗ್ಗೆ 5ಗಂಟೆಗೆ ಪುತ್ರ ಎಚ್ಚರಗೊಂಡಾಗ ತಂದೆ ಮನೆಯಲ್ಲಿ ಕಾಣಿಸಲಿಲ್ಲ. ಆಸುಪಾಸಿನಲ್ಲಿ ಹುಡುಕಿ ಪತ್ತೆಯಾಗದಿದ್ದಾಗ ಬಾವಿಯನ್ನು ಪರಿಶೀಲನೆ ನಡೆಸಿದಾಗ ದೇಹ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚೆಗೆ ಯಾರೋ ಕ್ಯಾನ್ಸರ್ ನಿಂದ ಬಳಲುತಿದ್ದೀರಿ ಎಂದು ಹೇಳಿದ್ದನ್ನೇ ತಲೆಗೆ ಹಚ್ಚಿಕೊಂಡಿದ್ದರೆನ್ನಲಾಗಿದ್ದು, ವೈದ್ಯರಲ್ಲಿ ತಪಾಸಣೆ ನಡೆಸಿದಾಗ ಎಲ್ಲವೂ ಸರಿ ಇದೆ ಎಂದು ಹೇಳಿದ್ದರು. ಆದರೂ ಆರೋಗ್ಯ ಸಮಸ್ಯೆ ಬಗ್ಗೆ ಮಾನಸಿಕ ಆಘಾತಗೊಂಡು ಆತ್ಮಹತ್ಯೆ ನಡೆಸಿಕೊಂಡಿರಬಹುದೆಂದು ದೂರಿನಲ್ಲಿ ಹೇಳಲಾಗಿದೆ. ವಿಟ್ಲ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸುಮಾರು ಮೂರು ದಶಕಕ್ಕೂ ಅಧಿಕ ಸಮಯ ಪ್ರಧಾನ ಅರ್ಚಕರಾಗಿದ್ದು, ಬ್ರಹ್ಮಕಲಶದ ಬಳಿಕ ದೇವಾಲಯ ಆವರಣದಲ್ಲಿರುವ ವೆಂಕಟ್ರಮಣ ಮಠದ ಉಸ್ತುವಾರಿ ನೋಡಿಕೊಂಡಿದ್ದರು. ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.