Tuesday, January 21, 2025
ಸುದ್ದಿ

ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಖಾಸಗಿ ಬಸ್ ಹೊಂಡಕ್ಕೆ – ಕಹಳೆ ನ್ಯೂಸ್

ಬಂಟ್ವಾಳ: ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಖಾಸಗಿ ಬಸ್ಸೊಂದು ತಾನಾಗಿಯೇ ಚಲಿಸಿ ಹೊಂಡಕ್ಕೆ ಬಿದ್ದ ಘಟನೆ ನರಹರಿ ಎಂಬಲ್ಲಿ ನಡೆದಿದೆ.

ಕಲ್ಲಡ್ಕ ಸಮೀಪದ ನರಹರಿ ದೇವಸ್ಥಾನ ದ ರಸ್ತೆಯಲ್ಲಿ ನಿಲ್ಲಿಸಿದ್ದ ಬಸ್ ಹೊಂಡಕ್ಕೆ ಬಿದ್ದು ಜಖಂ ಗೊಂಡಿರುವುದು.
ಮಂಡ್ಯ ಜಿಲ್ಲೆಯ ಅರಾಧನಾ ಕಾಲೇಜು ವಿದ್ಯಾರ್ಥಿ ಗಳು ದ.ಕ.ಜಿಲ್ಲೆಯ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕೇಂದ್ರ ಗಳಿಗೆ ಪ್ರವಾಸ ಹೊರಟು ಇವತ್ತು ಮಧ್ಯಾಹ್ನ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ನರಹರಿ ಶ್ರೀ ಸದಾಶಿವ ದೇವಾಲಯಕ್ಕೆ ಭೇಟಿ ನೀಡಲು ಬಂದಿದ್ದಾರೆ. ‌ಅ ಸಂದರ್ಭದಲ್ಲಿ ಚಾಲಕ ಸಹಿತ ಸುಮಾರು ನಲವತ್ತು ಮಂದಿ ಈ ಬಸ್ ನಲ್ಲಿ ಪ್ರಯಾಣ ಬೆಳೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನರಹರಿ ಸದಾಶಿವ ದೇವಾಲಯ ದ ಸಮೀಪ ರಸ್ತೆಯಲ್ಲಿ ಬದಿಯಲ್ಲಿ ಬಸ್ ಪಾರ್ಕ್ ಮಾಡಿದ ಚಾಲಕ ವಿದ್ಯಾರ್ಥಿ ಗಳ ಜೊತೆಯಲ್ಲಿ ನರಹರಿ ಬೆಟ್ಟ ಹತ್ತಿದ್ದರು.

ಇವರೆಲ್ಲರೂ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ ಬರುವ ವೇಳೆ ನಿಲ್ಲಿಸಿ ದ್ದ ಬಸ್ ಅದರ ಷ್ಟ ಕ್ಕೆ ಚಲಿಸಿ ಮುಂದೆ ಸಾಗಿ ಅಲ್ಲೆ ಬದಿಯಲ್ಲಿ ಹೊಂಡಕ್ಕೆ ಬಿದ್ದಿದೆ.

ಬಸ್ ಅಲ್ಪಸ್ವಲ್ಲ ನಜ್ಜುಗುಜ್ಜಾಗಿದ್ದು ಬೇರೆ ಯಾವುದೇ ಅಪಾಯ ಸಂಭವಿಸಿ ಲ್ಲ. ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೋಲೀಸ್ ಠಾಣೆಯ ಎಸ್.ಐ.ಮಂಜುಳಾ ಮತ್ತು ಸಿಬ್ಬಂದಿ ಗಳು ಬೇಟಿ ನೀಡಿದ್ದಾರೆ.