Tuesday, January 21, 2025
ಸುದ್ದಿ

ಯಶಸ್ವಿಯಾಗಿ ಉಡಾವಣೆ ಕಂಡ ಜಿಸ್ಯಾಟ್ ಉಪಗ್ರಹ – ಕಹಳೆ ನ್ಯೂಸ್

ಭಾರತದ ಬ್ರಾಡ್ ಬ್ಯಾಂಡ್ ಸೇವೆಯಲ್ಲಿ ಮಹತ್ವದ ಪಾತ್ರ ವಹಿಸಲಿರುವ ಜಿಸ್ಯಾಟ್ ಉಪಗ್ರಹವನ್ನು ಇಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಫ್ರಾನ್ಸ್ ನ ಜಿಯಾನಾದ ಕೌರೌ ನಲ್ಲಿರುವ ಏರಿಯನ್ ಲಾಂಚ್ ಕಾಂಪ್ಲೆಕ್ಸ್ ನಲ್ಲಿ ಬುಧವಾರ ಬೆಳಗ್ಗಿನ ಜಾವ (ಸ್ಥಳೀಯ ಕಾಲಮಾನ) ಇದುವರೆಗೆ ಉಡ್ಡಯನ ಮಾಡಲಾದ ಅತೀ ಭಾರದ ಉಪಗ್ರಹ ಎಂಬ ಖ್ಯಾತಿಗೆ ಪಾತ್ರವಾಗಿರುವ ಜಿಸ್ಯಾಟ್ -11 5870 ಕೆಜಿ ತೂಕವಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ನಿರ್ಮಿಸಿರುವ ಈ ಉಪಗ್ರಹವನ್ನು ಇಂದು ಫ್ರಾನ್ಸ್ ನಲ್ಲಿ ಉಡ್ಡಯನ ಮಾಡಲಾಗಿದೆ. ಭಾರತದ ಅತ್ಯಂತ ತೂಕದ, ಮತ್ತು ಅತ್ಯಂತ ಶಕ್ತಿಯುತ ಉಪಗ್ರಹವನ್ನು ಇಂದು ಉಡಾವಣೆ ಮಾಡಲಾಯಿತು’ ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ಉಡಾವಣೆಯ ನಂತರ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

“ಜಿಸ್ಯಾಟ್ -11 ಉಪಗ್ರಹವು ಭಾರತದ ಶ್ರೀಮಂತ ಆಸ್ತಿ.ಇದು ದೇಶದ ದೂರ ದೂರದ ಪ್ರದೇಶಗಳಲ್ಲೂ ಸೆಕೆಂಡಿಗೆ 16 ಜಿಬಿ ಡೆಟಾ ಲಿಂಕ್ ಸರ್ವಿಸ್ ನೀಡಲು ಸಮರ್ಥವಾಗಿದೆ” ಎಂದು ಶಿವನ್ ಹೇಳಿದರು.

ಜಿಸ್ಯಾಟ್ ನಿಂದಾಗಿ ಭಾರತದ ಮೂಲೆ ಮೂಲೆಯ ಹಳ್ಳಿಗಳೂ ಅಂತರ್ಜಾಲ ಸೌಲಭ್ಯ ಪಡೆಯಬಹುದಾಗಿದೆ. 500 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಉಪಗ್ರಹ ಅಂತರ್ಜಾಲ ಕ್ಷೇತ್ರದಲ್ಲಿ ಕ್ರಾಂತಿ ಎಬ್ಬಿಸಲಿದೆ. ಕೇಂದ್ರದ ಡಿಜಿಟಲ್ ಇಂಡಿಯಾ ಅಭಿಯಾನದಡಿ ದೇಶದ ಮೂಲೆ ಮೂಲೆಗೂ ಅಂತರ್ಜಾಲ ಕಲ್ಪಿಸುವ ಉದ್ದೇಶಕ್ಕೆ ಇದು ಪೂರಕವಾಗಲಿದೆ.

ವಾರದ ಹಿಂದೆ ನಭಕ್ಕೆ ಹಾರಿದ್ದ 31 ಉಪಗ್ರಹಗಳು ನವೆಂಬರ್ 29 ರಂದು ಇಂಡಿಯನ್ ಅರ್ಥ್ ಮ್ಯಾಪಿಂಗ್ ಉಪಗ್ರಹ ಹಿಸಿಸ್ ಮತ್ತು 8 ದೇಶಗಳ 30 ಕ್ಕೂ ಹೆಚ್ಚು ಉಪಗ್ರಹಗಳನ್ನು ಹೊತ್ತಿದ್ದ ಪಿಎಸ್ ಎಲ್ ವಿ (ಪೊಲಾರ್ ಸಾಟಲೈಟ್ ಲಾಂಚ್ ವೆಹಿಕಲ್) ರಾಕೆಟ್ ಅನ್ನು ಇಸ್ರೋ ಉಡ್ಡಯನ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಉಡ್ಡಯನ ಮಾಡಲಾಗಿದ್ದ ಈ ಉಪಗ್ರಹ ಭೂಮಿಯ ಹೊರಮೇಲ್ಮೈ ಅನ್ನು ಅಭ್ಯಸಿಸುವ ಉದ್ದೇಶ ಹೊಂದಿದೆ.