Monday, January 20, 2025
ಸುದ್ದಿ

ಕೇವಲ ನಾಲ್ಕು ಗಂಟೆಗಳಲ್ಲಿ ಪಾನ್ ಕಾರ್ಡ್ ವಿತರಿಸಲು ಕ್ರಮ: ಸುಶೀಲ್ ಚಂದ್ರ – ಕಹಳೆ ನ್ಯೂಸ್

ಈಗ 2.5 ಲಕ್ಷ ರೂ. ಗಳಿಗೂ ಅಧಿಕ ವಹಿವಾಟು ನಡೆಸುವವರು ಕೂಡಾ ಪಾನ್ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ. ಹೀಗಾಗಿ ಪಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಿ ಹಲವು ದಿನಗಳ ಕಾಲ ಕಾಯಬೇಕೆಂಬ ವ್ಯಾಪಾರಸ್ಥರ ಸಮಸ್ಯೆ ಈಗ ಬಗೆಹರಿಯಲಿದೆ.

ಹೌದು, ನೇರ ತೆರಿಗೆ ವಿಭಾಗದ ಕೇಂದ್ರ ಮಂಡಳಿಯ ಅಧ್ಯಕ್ಷ ಸುಶೀಲ್ ಚಂದ್ರ ಈ ಕುರಿತು ಮಾಹಿತಿ ನೀಡಿದ್ದು, ಇನ್ನು ಮುಂದೆ ಕೇವಲ ನಾಲ್ಕು ಗಂಟೆಗಳಲ್ಲಿ ಪಾನ್ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಕ್ಕಾಗಿ ಈಗಾಗಲೇ ಸಿದ್ಧತೆಯನ್ನು ಕೈಗೊಂಡಿದ್ದು, ಶೀಘ್ರದಲ್ಲೇ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಿರುವ ಸುಶೀಲ್ ಚಂದ್ರ, ಇದರಿಂದಾಗಿ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರಿಗೆ ನಾಲ್ಕು ಗಂಟೆಗಳಲ್ಲಿ ಪಾನ್ ಕಾರ್ಡ್ ಲಭ್ಯವಾಗಲಿದೆ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು