Monday, January 20, 2025
ಸುದ್ದಿ

ಆರ್‌ಟಿಐ ಕಾರ್ಯಕರ್ತರ ಮೇಲೆ ಬಿಸಿನೀರು ಎರಚಿ ಆಕ್ರೋಶ ವ್ಯಕ್ತಪಡಿಸಿದ ಪಂ.ಉಪಾಧ್ಯಕ್ಷ್ಯೆ – ಕಹಳೆ ನ್ಯೂಸ್

ಬೆಳ್ತಂಗಡಿ: ವಸತಿ ಯೋಜನೆಯೊಂದರ ಮನೆ ವಿಚಾರದಲ್ಲಿ ಪರಿಶೀಲನೆಗೆ ತೆರಳಿದ ಸಂದರ್ಭ ಪಂ.ಉಪಾಧ್ಯಕ್ಷೆಯೊಬ್ಬರು ಆರ್‌ಟಿಐ ಕಾರ್ಯಕರ್ತರೊಬ್ಬರ ಮೇಲೆ ಬಿಸಿನೀರು ಎರಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಉಜಿರೆ ಸನಿಹ ಮಂಗಳವಾರ ನಡೆದಿದೆ.

ಉಜಿರೆ ಗ್ರಾಮದ ಮಲೆಬೆಟ್ಟು ಎಂಬಲ್ಲಿನ ರಜತ ಗೌಡ ಎಂಬುವರಿಗೆ ನಾಲ್ಕು ವರ್ಷದ ಹಿಂದೆ ವಸತಿ ಯೋಜನೆಯಲ್ಲಿ ಮನೆ ಮಂಜೂರಾಗಿತ್ತು. ಆದರೆ ಕಟ್ಟಿದ ಮನೆ ವಿಚಾರದಲ್ಲಿ ಅವ್ಯವಹಾರದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯೊಂದಿಗೆ ಗ್ರಾ.ಪಂ. ಉಪಾಧ್ಯಕ್ಷೆ, ಸಿಬ್ಬಂದಿಗಳು ಸದಸ್ಯರು ತೆರಳಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಸತಿ ಯೋಜನೆಯ ಪ್ರಕಾರ ಏಳುನೂರು ಚದರ ಅಡಿ ಮನೆ ಇರುವಲ್ಲಿ ಒಂದು ಸಾವಿರ ಚದರ ಅಡಿಯ ಮನೆ ಕಟ್ಟಿದ್ದರು. ಹೀಗಾಗಿ ಆರ್‍ ಟಿಐ ಕಾರ್ಯಕರ್ತ ಉಜಿರೆಯ ಬಾಲಸುಬ್ರಹ್ಮಣ್ಯ ಭಟ್ ದೂರು ನೀಡಿದ್ದರು.

ಪರಿಶೀಲನೆಯ ಸಂದರ್ಭ ಬಾಲಸುಬ್ರಹ್ಮಣ್ಯ ಭಟ್ಟರೂ ಸ್ಥಳದಲ್ಲಿದ್ದರು. ಈ ವೇಳೆ ಅಲ್ಲಿದ್ದ ಗ್ರಾ.ಪಂ. ಉಪಾಧ್ಯಕ್ಷೆ ವಿನುತಾ ರಜತ ಗೌಡ ಎಂಬುವರು ಭಟ್ಟರ ಮೇಲೆ ಏಕಾಏಕಿ ಬಿಸಿ ನೀರು ಎರಚಿದ್ದಾರೆ.

ಬಾಲಸುಬ್ರಹ್ಮಣ್ಯ ಭಟ್ಟರ ಶರೀರದಲ್ಲಿ ಸುಟ್ಟ ಗಾಯಗಳಾಗಿದ್ದು, ಬೆಳ್ತಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.