Monday, January 20, 2025
ಸುದ್ದಿ

ಆಡಿಯೋ ವೈರಲ್: ಮಂಗಳೂರು ಪೊಲೀಸ್ ಕಮಿಷನರ್‌ ವಿಚಾರಣೆಗೆ ಆದೇಶ – ಕಹಳೆ ನ್ಯೂಸ್

ಮಂಗಳೂರು: ವಿವಿಧ ಪ್ರಕರಣಗಳ ಆರೋಪಿ ಪಾತಕಿ ತಲಕ್ಕಿ ರಫೀಕ್ ಎಂಬಾತನ ಜೊತೆ ಮಂಗಳೂರು ಸಿಸಿಬಿ ಪೊಲೀಸ್ ಕಾನ್ಸ್​ಟೇಬಲ್ ಹಣಕಾಸಿನ ವಿಚಾರದಲ್ಲಿ ಸಂಭಾಷಣೆ ನಡೆಸಿದ ಆಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್‌ ಟಿ ಆರ್ ಸುರೇಶ್ ವಿಚಾರಣೆಗೆ ಆದೇಶಿಸಿದ್ದಾರೆ.

ಕರ್ನಾಟಕ ಮತ್ತು ಕೇರಳ ರಾಜ್ಯದ ವಿವಿಧ ಠಾಣೆಗಳಲ್ಲಿ ರಫೀಕ್ ವಿರುದ್ದ ಪ್ರಕರಣಗಳಿವೆ. ಆರೋಪಿಯಾಗಿರುವ ಈತನನ್ನು ಇತ್ತೀಚೆಗೆ ಸಿಸಿಬಿ ಪೊಲೀಸರು ಬಂಧಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪಾತಕಿ ತಲಕ್ಕಿ ರಫೀಕ್ ಮತ್ತು ಮಂಗಳೂರು ಸಿಸಿಬಿ ಪೊಲೀಸ್ ಕಾನ್ಸ್​ಟೇಬಲ್ ಚಂದ್ರ ಎಂಬವರ ನಡುವೆ ನಡೆದಿದೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಆಡಿಯೋದಲ್ಲಿ ಪಾತಕಿಗೆ ಬೇಕಾದವರ ಅಥವಾ ವಿರೋಧಿ ಗ್ಯಾಂಗಿನ ಸದಸ್ಯರು ಮೊಬೈಲ್ ಲೊಕೇಶನ್ ಸೇರಿದಂತೆ ಇಲಾಖೆಯ ಮಾಹಿತಿಗಳನ್ನು ಕಾನ್ಸ್​ಟೇಬಲ್ ನೀಡುತ್ತಿದ್ದರು ಎಂದು ಆರೋಪಿಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಲಯಾಳಿ ಭಾಷೆಯಲ್ಲಿರುವ ಈ ಆಡಿಯೋದಲ್ಲಿ ಹಣಕಾಸಿನ ವಿಚಾರದ ಸಂಭಾಷಣೆ ಕೂಡ ಇದೆ . ಇದೇ ಮಾಹಿತಿಯನ್ನು ಉಪಯೋಗಿಸಿಕೊಂಡು ರಫೀಕ್ ಪಾತಕ ಕೃತ್ಯ ಎಸಗುತ್ತಿದ್ದ ಎಂಬ ಆರೋಪ ಸಹ ಕೇಳಿ ಬರುತ್ತಿದೆ.

ತಲಕ್ಕಿ ರಫೀಕ್ ಜೊತೆ ಪೊಲೀಸ್ ಸಿಬ್ಬಂದಿಯ ಸಂಭಾಷಣೆ ಗಮನಕ್ಕೆ ಬಂದಿದೆ ಎಂದು ತಿಳಿಸಿರುವ ಪೊಲೀಸ್ ಕಮೀಷನರ್ ಅವರು ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಮತ್ತು ಇಲಾಖೆಯಲ್ಲಿ ಇರಬೇಕಾದ ಆಡಿಯೋ ಸೋರಿಕೆಯಾದ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.