Recent Posts

Monday, January 20, 2025
ಸುದ್ದಿ

ಕರಾವಳಿಯಲ್ಲಿ ಈಗ ಉಮಿಲ್ ದ್ದೇ ಮಾತು; ರಿಲೀಸ್ ಗೆ ಸಿದ್ಧವಾಗಿದೆ ರಂಜಿತ್ ಸುವರ್ಣ ನಿರ್ದೇಶನದ ಉಮಿಲ್ ತುಳು ಚಲನಚಿತ್ರ – ಕಹಳೆ ನ್ಯೂಸ್

ಮಂಗಳೂರು: ತುಳು ಇಂಡಸ್ಟ್ರಿಯಲ್ಲಿ ಈಗ ಸೊಳ್ಳೆಯದ್ದೆ ಕಡಿತ. ಹೌದು ಕೋಸ್ಟಲ್‍ವುಡ್‍ನಲ್ಲಿ ಉಮಿಲ್ ಅನ್ನೊ ಶೀರ್ಷಿಕೆಯಡಿ ಹೊಸ ಸಿನೆಮಾ ರಿಲೀಸಿಗೆ ರೆಡಿಯಾಗಿದೆ. ಉಮಿಲ್ ಅಂದ್ರೆ ಕನ್ನಡದಲ್ಲಿ ಸೊಳ್ಳೆ ಅಂತ ಅರ್ಥ.

ಕರಾವಳಿಗರಿಗೆ ಈ ಕಾನ್ಸೆಪ್ಟ್ ಸ್ವಲ್ಪ ಹೊಸ್ತು ಅನ್ಬೋದು. ಯಾಕಂದ್ರೆ ತಮಿಳು, ತೆಲುಗು ಭಾಷೆಯಲ್ಲಿ ಆಲ್ ರೆಡಿ ಈಗ,ಈಚ ಅನ್ನೋ ಹೆಸರಿನಲ್ಲಿ ಈ ಕೀಟಗಳು ಬಂದು ಹವಾ ಸೃಷ್ಟಿಸಿತ್ತು. ಇದೀಗ ಕೋಸ್ಟಲ್ ವುಡ್‍ನಲ್ಲಿ ಉಮಿಲ್ ಅನ್ನೋ ಹೆಸರಿನ ಮೂಲಕ ಸೊಳ್ಳೆ ತನ್ನ ಪವರ್ ಎಷ್ಟಿದೆ ಅನ್ನೋದನ್ನ ತೋರ್ಸೊಕೆ ಬರ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಸ್. ರಂಜಿತ್ ಸುವರ್ಣ ನಿರ್ದೇಶನದ ಈ ಸಿನೆಮಾ ಸದ್ಯ ಕೋಸ್ಟಲ್ ವುಡ್‍ನಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡ್ತಿದೆ. ಟ್ರೇಲರ್ ನೋಡಿ ಸಿನಿ ರಸಿಕರು ಯಾವಾಗ ಒಮ್ಮೆ ಸಿನೆಮಾ ನೋಡ್ತಿವೋ ಅಂತ ತುದಿಗಾಲ್ಲಲಿ ನಿಂತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತುಳು ಇಂಡಸ್ಟ್ರಿ ಮಾರ್ಕೆಟ್ ಬೆಳಿತಾ ಇದೆ. ಬೇರೆ ಭಾಷೆಯವ್ರು ಕೂಡ ಕೋಸ್ಟಲ್ ವುಡ್‍ನತ್ತ ಅಟ್ರ್ಯಾಕ್ಟ್ ಆಗ್ತಿದ್ದಾರೆ. ಹೀಗಿರೋವಾಗ್ಲೆ ತುಳು ಸಿನೆಮಾ ಲೋಕದಲ್ಲಿ ಉಮಿಲ್ ಅನ್ನೋ ವಿಶೇಷ ಕಥಾ ಹಂದರವಿರೋ ಸಿನೆಮಾ ಬರೋಕೆ ಸಿದ್ಧವಾಗ್ತಿದೆ.

ಇನ್ನೂ ತುಳು ಚಿತ್ರರಂಗದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಉಮಿಲಿಗೆ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.ಹಾಗಾಗಿ ಪ್ರಪ್ರಥಮ ಬಾರಿಗೆ ಗ್ರಾಫಿಕ್ಸ್ ಬಳಕೆ ಮಾಡಿದ ಸಿನೆಮಾ ಅನ್ನುವ ಹೆಗ್ಗಳಿಕೆಗೂ ಈ ಚಿತ್ರ ಪಾತ್ರವಾಗಿದೆ.

ಭವಾನಿ ಫಿಲ್ಮ್ ಮೇಕರ್ಸ್ ಅಡಿಯಲ್ಲಿ ಉಮಿಲ್ ಚಿತ್ರ ಮೂಡಿ ಬರ್ತಾ ಇದ್ದು ಉಮೇಶ್ ಮಿಜಾರು ಇದೇ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಳ್ತಾ ಇದ್ದಾರೆ. ಇನ್ನೂ ಪೂಜಾ ಶೆಟ್ಟಿ ಉಮಿಲ್ ಚಿತ್ರದಲ್ಲಿ ನಾಯಕಿ ನಟಿಯಾಗಿ ಅಭಿನಯಿಸ್ತಿದ್ದಾರೆ.

ಕರುಣಾಕರಶೆಟ್ಟಿ ಸಾರಥ್ಯದಲ್ಲಿ ಮೂಡಿ ಬರ್ತಾ ಇರೋ ಈ ಚಿತ್ರಕ್ಕೆ ನವೀನ್ ಡಿ ಪಡೀಲ್, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್ ಚೇತನ್ ರೈ ಮಾಣಿ ಮೊದಲಾದ ಘಟಾನುಘಟಿಗಳೆ ಬಣ್ಣ ಹಚ್ಚಿದ್ದಾರೆ. ಇನ್ನೂ ಈ ಚಿತ್ರದ ಮೈನ್ ಸ್ಪೆಷಾಲಿಟಿ ಅಂದ್ರೆ ರಾವೊಡು ರಾವೊಡು ಅನ್ನುವ ಹಾಡಿಗೆ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕಂಠ ನೀಡಿರೋದು.

ಎಸ್ ಈ ಚಿತ್ರದ ಒಂದು ಹಾಡನ್ನ ಅಪ್ಪು ಅವರಿಂದ ಹಾಡಿಸಾಗಿದ್ದು,ಇದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಚಿತ್ರಕ್ಕೆ ರವಿ ಬಸ್ರೂರು ಅವರ ಸಂಗೀತ ಸಂಯೋಜನೆಯೂ ಇದೆ. ಇನ್ನೇನು ಚಿತ್ರ ಬಿಡುಗಡೆಯಾಗೋದಕ್ಕೆ ಕೌಂಟ್ ಡೌನ್ ಆರಂಭವಾಗಿದೆ. ಡಿಸೆಂಬರ್ 7ರಂದು ಚಿತ್ರ ಗ್ರ್ಯಾಂಡಾಗಿ ರಿಲೀಸಲಾಗಲಿದ್ದು ಚಿತ್ರ ಕೂಡ ಗ್ರ್ಯಾಂಡಾಗಿ ಸಕ್ಸಸ್ ಕಾಣ್ಲಿ ಅನ್ನೋದು ನಮ್ಮ ಆಶಯ ಕೂಡ.