Sunday, November 24, 2024
ಸುದ್ದಿ

ಹೂಡಿಕೆ ಮಾಡುವ ಮೊದಲು ಸಾಕಷ್ಟು ಯೋಚನೆ ಅಗತ್ಯ: ರಾಮಚಂದ್ರ ಭಟ್

ಪುತ್ತೂರು: ಹಣವಿಲ್ಲದವರು ಹಣ ಸಂಪಾದಿಸಲು ದುಡಿಯುತ್ತಾ ತಮ್ಮ ಜೀವನ ಕಳೆದರೆ, ಶ್ರೀಮಂತರು ಹಣ ತಮಗಾಗಿ ದುಡಿಯುವಂತೆ ಮಾಡಬಲ್ಲರು. ಹೀಗಾಗಿ ಯಾವುದೇ ಒಂದು ವಿಷಯದ ಮೇಲೆ ಹೂಡಿಕೆ ಮಾಡುವ ಮೊದಲು ಮನುಷ್ಯ ನೂರು ಬಾರಿ ಯೋಚಿಸುತ್ತಾನೆ. ಹಣದ ವಿಷಯ ಬಂದಾಗ ಯಾರನ್ನೂ ಕೂಡ ಯಾರೂ ಸುಲಭವಾಗಿ ನಂಬುವುದಿಲ್ಲ ಎಂದು ಮಂಗಳೂರಿನ ಎಂ.ಜಿ.ಎಂ ಕಾಲೇಜಿನ ಉಪನ್ಯಾಸಕ ರಾಮಚಂದ್ರ ಭಟ್ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯ ವಿಭಾಗ ಆಯೋಜಿಸಿದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಾಣಿಜ್ಯ ವ್ಯವಹಾರಗಳ ಕುರಿತು ಮಂಗಳವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪರಿಚಯವಿಲ್ಲದ ವ್ಯಕ್ತಿಗಳನ್ನು ನಂಬಿ ಜೀವವನ್ನು ಅವರ ಕೈಯಲ್ಲಿಡುವ ನಾವು ಹಣದ ವಿಷಯ ಬಂದಾಗ ಅತ್ಮೀಯರೆನಿಸಿಕೊಂಡವರನ್ನು ನಂಬಲು ಹಿಂದೆ ಮುಂದೆ ನೋಡುತ್ತೇವೆ. ಮ್ಯೂಚುವಲ್ ಫಂಡ್ಸ್ ಎಂಬುವುದು ನಾವು ಹೂಡಿರುವ ಹಣಕ್ಕೆ ಭದ್ರತೆಯನ್ನು ಒದಗಿಸುತ್ತದೆ. ಅಂತೆಯೇ ನಮ್ಮ ಹೂಡಿಕೆ ಲಾಭದಾಯಕವಾಗಿ ಹಿಂದಿರುಗಬೇಕೆಂದರೆ ಹಲಾವರು ವರ್ಷಗಳ ಕಾಲ ಕಾಯುವ ತಾಳ್ಮೆ ನಮಗಿರಬೇಕು. ಆಗ ಮಾತ್ರ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ವ್ಯಾಪರಕ್ಕಿಂತ ಹೂಡಿಕೆ ಹೆಚ್ಚಿನ ಲಾಭ ತಂದುಕೊಡುತ್ತದೆ. ಆದರೆ ಹಣಕಾಸಿನ ಜ್ಞಾನದ ಕೊರತೆಯಿಂದ ಜನ ಹೂಡಿಕೆಗಳ ಮೂಲಕ ಹಣ ಗಳಿಸುವ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಹಣ ಎಂಬುವುದು ಪ್ರತಿಷ್ಟೆ ತಂದುಕೊಡುತ್ತದೆ ಎಂಬುವುದು ಸತ್ಯ. ಆದರೆ ಅಹಂಕಾರದ ಮದದಿಂದ ನಾವು ಮಾನವೀಯತೆಯನ್ನು ಎಂದಿಗೂ ಮರೆಯಬಾರದು. ಏಕೆಂದರೆ ಹಣ ಇಂದು ಬರುತ್ತದೆ, ನಾಳೆ ಹೋಗಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ. ಹೆಚ್.ಜಿ. ಶ್ರೀಧರ್ ಮಾತನಾಡಿ, ಯಾವುದೇ ಒಂದು ವಿಷಯದ ಬಗ್ಗೆ ನಮಗೆ ಜ್ಞಾನವಿಲ್ಲದೇ ಹೋದಾಗ, ಆ ಕುರಿತಾಗಿ ನಮ್ಮ ಹಾದಿ ತಪ್ಪಿಸುವವರು ನೂರಾರು ಮಂದಿ ಇರುತ್ತಾರೆ. ಇಂದು ಹಣವನ್ನು ಸಂಪಾದಿಸುವ ವ್ಯಾಮೋಹ ನಮ್ಮನ್ನು ಜೀವನದ ಅನೇಕ ಸಣ್ಣ-ಪುಟ್ಟ ಖುಷಿಗಳಿಂದ ವಂಚಿತರನ್ನಾಗಿ ಮಾಡುತ್ತಿದೆ.

ನಾವು ಎಷ್ಟು ದಿನ ಬದುಕಿದ್ದೇವೆ ಎನ್ನುವುದಕ್ಕಿಂತ, ಹೇಗೆ ಬದುಕ್ಕಿದ್ದೆವು ಎನ್ನುವುದು ಮುಖ್ಯವೆನಿಸಿಕೊಳ್ಳುತ್ತದೆ. ಅಂತೆಯೇ ನಾವು ಎಷ್ಟು ಹಣ ಸಂಪಾದಿಸಿದ್ದೇವೆ ಎನ್ನುವುದಕ್ಕಿಂತ ಯಾವ ರೀತಿ ಗಳಿಸಿದ್ದೇವೆ ಹಾಗು ಎಷ್ಟು ಅರ್ಥಪೂರ್ಣವಾಗಿ ವಿನಿಯೋಗಿಸಿದ್ದೇವೆ ಎನ್ನುವುದು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಎಂದು ನುಡಿದರು.

ವಿದ್ಯಾರ್ಥಿನಿ ರಶ್ಮಿ ಬಿ. ಪ್ರಾರ್ಥಿಸಿದರು. ಅತಿಥಿ ಉಪನ್ಯಾಸ ಕಾರ್ಯಕ್ರಮಗಳ ಸಂಯೋಜಕಿ, ವಿದ್ಯಾರ್ಥಿನಿ ಜಯಶ್ರೀ ಸ್ವಾಗತಿಸಿ, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ಡಾ. ವಿಜಯ ಸರಸ್ವತಿ ಪ್ರಸಾವನೆಗೈದರು. ವಿದ್ಯಾರ್ಥಿನಿ ಪವಿತ್ರಾ ಡಿ. ವಂದಿಸಿ, ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.