ಪುತ್ತೂರು: ಸ್ವಾಮಿ ವಿವೇಕಾನಂದರು ಒಬ್ಬ ಅದ್ಭುತ ಸಂತ. ಅವರು ಚಿಕಾಗೋದಲ್ಲಿ ಮಾತ್ರವಲ್ಲ, ನಂತರವೂ ಇಡೀ ವಿಶ್ವವನ್ನೇ ಗೆದ್ದಂತಹ ಮಹಾನ್ ಚಿಂತಕರು. ಭಾರತದ ಪ್ರಾಚೀನ ವಿದ್ಯೆಗಳನ್ನು ಅರಿತು, ಅದರ ಕುರಿತಾದ ಜ್ಞಾನವನ್ನು ಜಗತ್ತಿಗೆ ಪಸರಿಸಿದ ಮೇಧಾವಿ ಸ್ವಾಮಿ ವಿವೇಕಾನಂದ ಎಂದು ಶ್ರೀ ರಾಮಕೃಷ್ಣ ಆಶ್ರಮದ ಪ್ರತಿನಿಧಿ, ವಾಗ್ಮಿ ಶ್ರೀಕೃಷ್ಣ ಉಪಧ್ಯಾಯ ತಿಳಿಸಿದರು.
ಅವರು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಿಭಾಗಳು ಮತ್ತು ಮಂಗಳೂರಿನ ರಾಮಕೃಷ್ಣ ಆಶ್ರಮದ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಆಯೋಜಿಸಲಾದ ವಿಶ್ವವಿಜೇತ ಸ್ವಾಮಿ ವಿವೇಕಾನಂದರ ಚಿಕಾಗೋ ಬಾಷಣದ ೧೨೫ನೇ ವರ್ಷೋತ್ಸವದ ಹಿನ್ನೆಲೆಯಲ್ಲಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿವೇಕಾನಂದರು ಹಿಂದೂ ಧರ್ಮದ ಮಹತ್ವವನ್ನು ವಿಶ್ವಕ್ಕೆ ಸಾರಿದವರು. ಮಡಿವಂತಿಕೆ ಎಂಬುದು ಭಾರತದಲ್ಲಿ ಹಾಸು ಹೋಕ್ಕಾಗಿದ್ದ ಸಂದರ್ಭದಲ್ಲಿ ಚಿಕಾಗೋದಲ್ಲಿ ಏರ್ಪಡಿಸಿದ್ದ ಸರ್ವ ಧರ್ಮ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಲು ಕಡಲನ್ನು ದಾಟಿದವರು.
ಯಾವುದೇ ಜಾತಿ ಬೇಧವಿಲ್ಲದೇ ಎಲ್ಲರೂ ಸಮಾನ ಎಂದು ಮನಗಂಡವರು. ಅವರು ಕೇವಲ ಭಾರತದ ಆಸ್ತಿಯಲ್ಲ ಬದಲಾಗಿ ಇಡೀ ವಿಶ್ವದ ಆಸ್ತಿ. ಯುವಜನತೆಯಲ್ಲಿ ಆತ್ಮವಿಶ್ವಾಸದ ಬೀಜವನ್ನು ಬಿತ್ತಿದ್ದವರು. ಭಾರತಕ್ಕೆ ಬೇಕಾದುದು ಚಾರಿತ್ರ್ಯದಲ್ಲಿ ಕಳಂಕವಿಲ್ಲದ ಯುವ ವ್ಯಕ್ತಿತ್ವ. ಅಂತಹ ಯುವ ಜನಾಂಗಕ್ಕೆ ವಿವೇಕಾನಂದರು ಮಾರ್ಗದರ್ಶಕರಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಐಕ್ಯುಎಸಿ ಸಂಯೋಜಕ ಡಾಎಚ್.ಜಿ.ಶ್ರೀಧರ್ ಮಾತನಾಡಿ, ವಿವೇಕಾನಂದರು ವಿಶಾಲವಾದ ಜ್ಞಾನವನ್ನು ಹೊಂದಿದ್ದರು. ನಮ್ಮ ದೇಶದ ಸಂಸ್ಕೃತಿಯ ಅರ್ಥವನ್ನು ಅಳವಾಗಿ ಅರಿತುಕೊಂಡು ಜಗತ್ತಿಗೆ ಭಾರತದ ಹಿರಿಮೆಯ ಕುರಿತು ಸಾರಿದವರು. ನಮ್ಮ ದೇಶ ವಿಶ್ವಕ್ಕೆ ಮಾನವ ಸಂಪತ್ತಿನ ಜ್ಞಾನದ ಜೊತೆಗೆ ಅದರ ಸದ್ಬಳಕೆಯ ಸಾರವನ್ನು ವಿಶ್ವಕ್ಕೆ ಸಾರಿದೆ ಎಂದು ನುಡಿದರು.
ಸ್ನಾತಕೋತ್ತರ ವಿಭಾಗಗಳ ಸಂಯೋಜಕಿ ಡಾ.ವಿಜಯ ಸರಸ್ವತಿ ಸ್ವಾಗತಿಸಿ, ರಸಾಯನಶಾಸ್ತ್ರ ವಿಭಾಗದ ಸಂಯೋಜಕ ಡಾ ವಿಜಯ ಗಣಪತಿP Áರಂತ ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಅನನ್ಯ ವಿ. ನಿರೂಪಿಸಿದರು.