Recent Posts

Sunday, January 19, 2025
ಸುದ್ದಿ

ಸರಕಾರಕ್ಕೆ ಅಸಾಧ್ಯವಾದರೆ ಗೋ ಕಳ್ಳರನ್ನು ನಾವೇ ಎದುರಿಸುತ್ತೇವೆ | ಶರಣ್ ಪಂಪ್ ವೆಲ್.

ಉಡುಪಿ : ಕಂಡ್ಲೂರಿನಲ್ಲಿ ಅಕ್ರಮ ಗೋ ಸಾಗಟಗಾರರಿಂದ ಪೋಲಿಸ್ ಪೇದೆಯೊಬ್ಬರು ಅಕ್ರಮಣಕ್ಕೊಳಗೀಡಾದ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಹಾಗೂ ಬಜರಂಗದಳ ರಾಜ್ಯ ಸರಕಾರ ಎಂದೂ ಕಾಣದಂತಹ ಕಾನೂನು ವೈಫಲ್ಯದೆಡೆಗೆ ಸಾಗುತ್ತಿದೆ ಎಂದು ಅರೋಪಿಸಿದೆ.

ಉಡುಪಿಯಲ್ಲಿ ನವೆಂಬರ್ 24 ರಿಂದ ಆರಂಭವಾಗಲಿರುವ ’ ಧರ್ಮ ಸಂಸದ್’ ನ ತಯಾರಿ ಬಗ್ಗೆ ಅವಲೋಕನ ನಡೆಸಲು ಕರೆದಿದ್ದ ಸಭೆಯಲ್ಲಿ ಮಾತಾನಾಡಿದ ಬಜರಂಗ ದಳ ವಿಭಾಗೀಯ ಸಂಯೋಜಕರಾದ ಶರಣ್ ಪಂಪ್ ವೆಲ್” ಸಿದ್ಧರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ನಂತರ ಗೋ ಕಳ್ಳತನ, ಅಕ್ರಮ ಗೋ ಸಾಗಣಿಕೆ ಹಾಗೂ ಅನಧಿಕೃತ ಕಸಾಯಿ ಖಾನೆಗಳು ಎಗ್ಗಿಲ್ಲದೆ ಕಾರ್ಯಚರಿಸುತ್ತವೆ. ಇದಕ್ಕೆ ಕಡಿವಾಣ ಹಾಕಲು ಒತ್ತಾಯಿಸಿ ವಿವಿಧ ಸಂಘಟನೆಗಳು ಹಾಗೂ ಸಂಸ್ಥೆಗಳು ಹಲವಾರು ಭಾರಿ ಸರಕಾರಕ್ಕೆ ಮನವಿಗಳನ್ನು ಸಲ್ಲಿಸಿದ್ದುವಾದರೂ ಸರಕಾರ ಕಣ್ಣು ಹಾಗೂ ಕಿವಿಗಳನ್ನು ಮುಚ್ಚಿ ಕುಳಿತುಕೊಂಡಿದೆ. ಇದು ಅಕ್ರಮ ಗೋ ಸಾಗಾಟಗಾರರಿಗೆ ವರದಾನವಾಗಿ ಪರಿಣಮಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

“ಕಳೆದ ದಿನ ಗೋ ಕಳ್ಳರ ಬಗ್ಗೆ ಮಾಹಿತಿ ನೀಡಿದ ಕಾರಣಕ್ಕಾಗಿ ನಂದಿನಿ ಎಂಬ ಯುವತಿಯ ಮೇಲೆ ಕೊಲೆಯತ್ನ ನಡೆಯಿತು. ಇದರ ವಿರುದ್ಧ ಸರಕಾರ ಈ ವರೆಗೆ ಯಾವುದೇ ಹೇಳಿಕೆಯನ್ನು ಕೊಡಲು ತಯಾರಾಗಿಲ್ಲ. ಇಂದು ಬೆಳಿಗ್ಗೆ ಗೋ ಸಾಗಟಗಾರರು ಪೋಲಿಸರನ್ನೇ ಕೊಲೆಗೈಯಲು ಪ್ರಯತ್ನಿಸಿದರು. ಆದರೆ ಸರಕಾರವು ಇದೊಂದು ಅಪಘಾತ ಎಂದು ಬಿಂಬಿಸಲು ಹೊರಟಿದೆ. ಇದು ಗೋ ಮಾತೆಯನ್ನು ಪೂಜಿಸುವ ಸಾವಿರಾರು ಮಂದಿ ಜನರ ಸಹನೆಯನ್ನು ಪರೀಕ್ಷಿಸುವುದಕ್ಕೆ ಸಮಾನವಾಗಿದೆ. ಮುಂದಿನ ದಿನಗಳಲ್ಲಿ ಸರಕಾರವು ಇದನ್ನು ಗಂಭೀರವಾಗಿ ಗಮನಿಸದೆ ಹೋದರೆ ಬಜರಂಗ ದಳವು ನೇರವಾಗಿ ಗೋ ಕಳ್ಳರನ್ನು ಹಿಡಿದು ಶಿಕ್ಷೆ ವಿಧಿಸಲಿದೆ” ಎಂದು ಎಚ್ಚರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response