Recent Posts

Sunday, January 19, 2025
ಸುದ್ದಿ

ಪೂಜಾರಿ ವಿರುದ್ದ ಅವ್ಯಾಚ್ಚವಾಗಿ ನಿಂದಿಸಿರುವುದನ್ನು ಬಿಜೆಪಿ ಪಕ್ಷ ಖಂಡಿಸುತ್ತದೆ: ಹರಿಕೃಷ್ಣ ಬಂಟ್ವಾಳ – ಕಹಳೆ ನ್ಯೂಸ್

ಬಂಟ್ವಾಳ: ಜನಾರ್ದನ ಪೂಜಾರಿ ಅವರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವ್ಯಾಚ್ಚವಾಗಿ ನಿಂದಿಸಿರುವುದನ್ನು ಬಿಜೆಪಿ ಪಕ್ಷ ಖಂಡಿಸುತ್ತದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದರು.

ಅವರು ಬಿಜೆಪಿ ಪಕ್ಷದ ಕಚೇರಿಯ ಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಹಿರಿಯ ಕಾಂಗ್ರೇಸ್ ವ್ಯಕ್ತಿಯ ವಿರುದ್ದ ಇಂತಹ ಹೇಳಿಕೆ ನೀಡುವ ವ್ಯಕ್ತಿಗಳು ಕಾಂಗ್ರೇಸ್ ಪಕ್ಷದಲ್ಲಿ ಇದ್ದಾರೆ ಎಂದರೆ ಇದು ಕಾಂಗ್ರೇಸ್ ನ ಮಾನಸಿಕ ಸ್ಥಿತಿ ಯನ್ನು ಎತ್ತಿತೋರಿಸುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಂಗ್ರೇಸ್ ಜಾತ್ಯಾತೀತ ಪಕ್ಷ ಎಂಬುದು ಕೇವಲ ನಾಟಕ ಎಂಬುದು ಈ ಹೇಳಿಕೆಯಲ್ಲಿ ಸ್ಪಷ್ಟ ವಾಗುತ್ತದೆ.‌
ಕಾಂಗ್ರೇಸ್ ಪಕ್ಷ ಅಲ್ಪಸಂಖ್ಯಾತ ಒಲೈಕೆ ಮಾಡಲಿರುವ ಪಕ್ಷ ಎಂಬುದು ಇದರಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂತಹ ಹೇಳಿಕೆ ನೀಡುವಾಗ ಪೋಲೀಸ್ ಇಲಾಖೆ ಏನು ಮಾಡುತ್ತಿದೆ ಎಂದು ಅವರು‌ ಪ್ರಶ್ನಿಸಿದರು. ‌ಹಿಂದೂ ಮುಸ್ಲಿಂ ಬಾಂಧ್ಯವ್ಯವನ್ನು ಕೆಡಿಸಲು, ಸಾಮರಸ್ಯ ವನ್ನು ಹಾಳುಮಾಡಲು ಮತ್ತು ಅಶಾಂತಿ ಸ್ರಷ್ಟಿಸಿಲು ಇವರು ಕುತಂತ್ರ ಮಾಡುತ್ತಿದ್ದಾರೆ.

ಈ ಹೇಳಿಕೆಯ ವಿರುದ್ದ ಕಾಂಗ್ರೇಸ್ ನ ನಾಯಕರು ಯಾರು ಮಾತೆತ್ತಿಲ್ಲ, ಜನಾರ್ದನ ಪೂಜಾರಿ ಅವರಿಗೆ ಮಾನಸಿಕ ವಾಗಿ ಬೇಜಾರು ಆಗಿದೆ, ಒಬ್ಬನೇ ಒಬ್ಬ ಬಿಲ್ಲವ ನಾಯಕ ಮಾತನಾಡಿಲ್ಲ . ಇಂತಹ ಹೇಳಿಕೆ ನೀಡಿದ ವ್ಯಕ್ತಿಯನ್ನು ಪೋಲೀಸರಿಗೆ ನೋಡಲು ಸಾಧ್ಯವಿಲ್ಲ ವಾದರೆ ತಿಳಿಸಲಿ ಬಿಜೆಪಿ ಪಕ್ಷದವರು ನೋಡಿಕೊಳ್ಳುತ್ತಾರೆ ಎಂದು ಅವರು ಗುಡುಗಿದರು.‌

ಕಾಂಗ್ರೇಸ್ ನವರು ಪೂಜಾರಿಯವರ ಬ್ಯಾನರ್ ಹೆಸರು ಹಾಕುವುದು ಕೇವಲ ಓಟಿಗಾಗಿ , ಅವರ ಮೇಲಿನ‌ಪ್ರೀತಿಯಿಂದಲ್ಲ, ಇಂತಹ ಸಮಯದಲ್ಲಿ ಪೂಜಾರಿ ಯವರ ಜೊತೆ ಬಿಜೆಪಿಯವರು ಇದ್ದಾರೆ ಎಂದು ನಾವು ಘಂಟಾಘೋಷವಾಗಿ ಭರವಸೆ ನೀಡುತ್ತೇವೆ ಎಂದರು.

ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ನಾಳೆ ಮಂಗಳೂರಿನಲ್ಲಿ ದೂರು ನೀಡುತ್ತಾರೆ. ಹಾಗಾಗಿ ಕೂಡಲೇ ಇಲಾಖೆ ವ್ಯಕ್ತಿಯನ್ನು ಬಂಧಿಸಿ ಕಾನೂನು ‌ಕ್ರಮ ಕೈಗೊಳ್ಳಲು ಮನವಿ ಮಾಡಿದರು.

ಗೋಷ್ಠಿಯಲ್ಲಿ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಜಿಲ್ಲಾ ಎಸ್.ಟಿ.ಮೋರ್ಚಾ ದ ಅಧ್ಯಕ್ಷ ದಿನೇಶ್ ಅಮ್ಟೂರು, ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಪ್ರಮುಖ ರಾದ ಮಹಾಬಲ ಶೆಟ್ಟಿ, ಸುದರ್ಶನ್ ಬಜೆ ಉಪಸ್ಥಿತರಿದ್ದರು.