Saturday, November 23, 2024
ಸುದ್ದಿ

ಮತ್ತೊಂದು ಸಮಸ್ಯೆ ಮೈಗೆಳೆದುಕೊಂಡ ಬಂಟ್ವಾಳದ ಇಂದಿರಾ ಕ್ಯಾಂಟೀನ್ – ಕಹಳೆ ನ್ಯೂಸ್

ಬಂಟ್ವಾಳ: ಎಲ್ಲಾ ವಿವಾದಗಳು ಬಗೆಹರಿದು ಇಂದಿರಾ ಕ್ಯಾಂಟೀನ್ ಗೆ ಉದ್ಘಾಟನೆ ಭಾಗ್ಯ ಬಂತು ಎಂದಾಗ ಅಂಬರೀಶ್ ನಿಧನರಾದರು, ಅ ಬಳಿಕ ಉದ್ಘಾಟನೆ ಕಾಣದೆ ಸೊರಗುತ್ತಿರುವ ಕ್ಯಾಂಟೀನ್ ಮತ್ತೊಂದು ಸಮಸ್ಯೆ ಮೈಗೆಳೆದುಕೊಂಡು ಸಾರ್ವಜನಿಕ ಕಂಗೆಣ್ಣಿಗೆ ಗುರಿಯಾಗಿದೆ.

ಬಿಸಿರೋಡಿನ ಮಿನಿವಿಧಾನ ಸೌಧದ ಕಚೇರಿಯ ಬಳಿಯಲ್ಲಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್ ಕಂಪೌಂಡ್ ವಿಚಾರದಲ್ಲಿ ಸಾಕಷ್ಟು ಸದ್ದುಗದ್ದಲ ಮಾಡಿತ್ತು. ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷಗಳು ಕಾದಾಟವನ್ನು ಮಾಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊನೆಗೂ ಜಿಲ್ಲಾಧಿಕಾರಿ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಇತ್ಯರ್ಥಕ್ಕೆ ತಂದು ಇನ್ನೇನು ಉದ್ಘಾಟನೆ ಯಾಗುತ್ತೆ ಎನ್ನುವಷ್ಟರಲ್ಲಿ ಅಂಬರೀಶ್ ನಿಧನ ಹೊಂದಿದರು. ಹಾಗಾಗಿ ಉದ್ಘಾಟನೆ ಕಾರ್ಯಕ್ರಮ ಮುಂದೂಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಡ್ರೈನೇಜ್ ಮುಚ್ಚಿದ ಪುರಸಭೆ: ಇಂದಿರಾ ಕ್ಯಾಂಟೀನ್
ಉದ್ಘಾಟನೆಗೆ ದಿನ ನಿಗದಿಯಾಗಿ ಎಲ್ಲಾ ಪೂರ್ವತಯಾರಿ ಮಾಡಲಾಗಿತ್ತು ಆದರೆ ಕ್ಯಾಂಟೀನ್ ನ ಮಲೀನ ನೀರು ಹೊರಹೋಗಲು ವ್ಯವಸ್ಥೆ ಮಾಡದೆ ಚಡಪಡಿಸುತ್ತಿದ್ದ ಪುರಸಭೆ ಇಂದು ಸಂಜೆಯ ವೇಳೆ ಜೆಸಿಬಿ ಬಳಸಿ ಕ್ಯಾಂಟೀನ್ ಪಕ್ಕದಲ್ಲಿರುವ ಒಳಚರಂಡಿಯ ಕಪ್ಪು ಕಲ್ಲುಗಳನ್ನು ತೆಗೆದು ನೀರು ಹೋಗುವ ಗುಂಡಿಯಲ್ಲಿ ಕ್ಯಾಂಟೀನ್ ನ ನೀರು ಹೋಗಲು ನಾಲ್ಕು ಇಂಚಿನ ಪಿ.ಯು.ಸಿ.ಪೈಪ್ ಅಳವಡಿಕೆ ಮಾಡುತ್ತಿದ್ದಾರೆ.

ಇಲ್ಲಿನ ರಸ್ತೆ ನೀರು ಹರಿದು ಹೋಗಲು ಮಾಡಲಾಗಿದ್ದ ಒಳಚರಂಡಿಯನ್ನೇ ಮುಚ್ಚಿ ಅದರ ಮೇಲೆ ಪೈಪ್ ಅಳವಡಿಕೆ ಸರಿಯಲ್ಲ, ಇದರಿಂದಾಗಿ ಮಳೆಗಾಲದಲ್ಲಿ ಸಾಕಷ್ಟು ತೊಂದರೆಗಳು ಅಗಲಿದೆ ಎಂದು ಸಾರ್ವಜನಿಕರು ಪುರಸಭೆಯ ಅಧಿಕಾರಿಗಳಲ್ಲಿ ಮತ್ತು ಗುತ್ತಿಗೆದಾರರಲ್ಲಿ ಹೇಳಿದ್ದಾರೆ.‌

ಅದರೆ ಇದ್ಯಾವುದಕ್ಕೂ ಸೊಪ್ಪು ಹಾಕದ ಪುರಸಭೆಯ ಮತ್ತು ತಹಶೀಲ್ದಾರ ಅವರು ಕೆಲಸ ಮುಂದುವರಿಸಿದ್ದಾರೆ.
ಇಲ್ಲಿ ಏನೂ ಅವ್ಯವಸ್ಥೆ ನಡೆದರೂ ಅನುಭವಿಸುವುದು ಮಾತ್ರ ಇಲ್ಲಿನ ಸಾರ್ವಜನಿಕರು.

ಡಿ.9 ರಂದು ಉದ್ಘಾಟನೆ:
ಉದ್ಘಾಟನೆಗೊಳ್ಳದೆ ಮುಂದೂಡಲ್ಪಟ್ಟ ಇಂದಿರಾ ಕ್ಯಾಂಟೀನ್ ಡಿ.9 ರಂದು ಉದ್ಘಾಟನೆಗೊಳ್ಳಲಿದೆ ಎಂದು‌ ಮೂಲಗಳು ತಿಳಿಸಿವೆ.