Friday, September 20, 2024
ಸುದ್ದಿ

ವಿದ್ಯುತ್ ಪರಿವರ್ತಕದಲ್ಲಿ ಬೆಂಕಿ: ಮೆಸ್ಕಾಂ ಇಲಾಖೆಗೆ ಕ್ರಮಕೈಗೊಳ್ಳಲು ಸ್ಥಳೀಯರ ಆಗ್ರಹ – ಕಹಳೆ ನ್ಯೂಸ್

ಬಂಟ್ವಾಳ: ಬಿಸಿರೋಡಿನ ಬಸ್ ನಿಲ್ದಾಣದ ಹಿಂಬದಿಯಲ್ಲಿರುವ ವಿದ್ಯುತ್ ಪರಿವರ್ತಕದಲ್ಲಿ ಸುಮಾರು ಎರಡು ಗಂಟೆಗಳಿಂದ ಬೆಂಕಿ ಕಾಣುತ್ತಿದೆ, ಜೊತೆಗೆ ಕರ್ಕಶ ಶಬ್ದ ಕೂಡಾ ಕೇಳಿ ಬರುತ್ತಿದ್ದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ‌

ಈ ವಿದ್ಯುತ್ ಪರಿವರ್ತಕದ ಅಡಿಯಲ್ಲಿ ಹಲವಾರು ವಾಹನಗಳು ಪಾರ್ಕ್ ಮಾಡಿದಲ್ಲದೆ, ಅಂಗಡಿಗಳಿವೆ. ವಿದ್ಯುತ್ ಪರಿವರ್ತಕದಲ್ಲಿ ಸಮಸ್ಯೆಯುಂಟಾಗಿ ಬೆಂಕಿಯ ಜ್ವಾಲೆ ಉಂಟಾಗಿದೆಯೋ ಅಥವಾ ಇನ್ಯಾವುದೇ ಕಾರಣದಿಂದಾಗಿಯೇ ಎಂಬುದು ತಿಳಿಯಿತ್ತಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂತೂ ಬೆಂಕಿಯಿಂದ ಸಮಸ್ಯೆಗಳು‌ ಅಗದಂತೆ ಮೆಸ್ಕಾಂ ಇಲಾಖೆಯವರು‌ ಕ್ರಮಕೈಗೊಳ್ಳಲು ಮುಂದಾಗುವಂತೆ ಸ್ಥಳೀಯರು ಇಲಾಖೆಗೆ ಕೋರಿದ್ದಾರೆ.

ಜಾಹೀರಾತು

ಇಲಾಖೆಗೆ ದೂರು ನೀಡಿ ಎರಡು ಗಂಟೆಗಳು ಕಳೆದರೂ ಯಾರು ಬಂದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.