Tuesday, January 21, 2025
ಸುದ್ದಿ

ಪುಂಜಾಲಕಟ್ಟೆ ಪೋಲೀಸ್ ಠಾಣೆಗೆ ಚಾರ್ಜ್ ಪಡೆದುಕೊಂಡ ಮಹಿಳಾ ಎಸ್ .ಐ – ಕಹಳೆ ನ್ಯೂಸ್

ಬಂಟ್ವಾಳ: ಪುಂಜಾಲಕಟ್ಟೆ ಪೋಲೀಸ್ ಠಾಣೆಗೆ ಮಹಿಳಾ ಎಸ್ .ಐ . ಸೌಮ್ಯ ಅವರು ಇಂದು ಠಾಣಾ ಪ್ರಭಾರವನ್ನು ವಹಿಸಿಕೊಂಡಿದ್ದಾರೆ.‌

ಈ ಹಿಂದೆ ಎಸ್.ಐ.ಆಗಿದ್ದ ಸತೀಶ್ ಬಲ್ಲಾಳ್ ಅವರ ಕೈಯಿಂದ ಇಂದು ಬೆಳಿಗ್ಗೆ ಸೌಮ್ಯ ಅವರು ಚಾರ್ಜ್ ಪಡೆದುಕೊಂಡಿದ್ದಾರೆ. ಮೂಲತ: ಮಂಗಳೂರು ತಾಲೂಕಿನ ಉಳ್ಳಾಲ ಮೂಲದವರಾದ ಸೌಮ್ಯ ಅವರು 2015 ರ ಬ್ಯಾಚ್ ಮೂಲಕ ಪೋಲೀಸ್ ಇಲಾಖೆಗೆ ಸೇರಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅ ಬಳಿಕ ತರಬೇತಿ ಮುಗಿಸಿ ನ.2017 ರಲ್ಲಿ ಬಂಟ್ವಾಳ ತಾಲೂಕಿನ ವಿಟ್ಲ ಠಾಣೆಯ ಲ್ಲಿ ನಾಲ್ಕು ತಿಂಗಳ ಕಾಲ ಪ್ರೋಬೆಶನರಿ ಅವಧಿ ಮುಗಿಸಿ ಬಳಿಕ ಮೇ. 2017 ರಿಂದ ನಾಲ್ಕು ತಿಂಗಳ ಕಾಲ‌ ಬಂಟ್ವಾಳದ ನಗರ ಠಾಣೆಯಲ್ಲಿ ಪ್ರೋಬೆಶನರಿ ಅವಧಿ ಮುಗಿಸಿದ ಬಳಿಕ ನೇರವಾಗಿ ಪುಂಜಾಲಕಟ್ಟೆ ಪೋಲೀಸ್ ಠಾಣೆಗೆ ಎಸ್.ಐ.ಅಗಿ ಕರ್ತವ್ಯ ನಿರ್ವಹಿಸಲು ಇಂದು ಚಾರ್ಜ್ ತೆಗೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

2017 ರ ಈ ಬ್ಯಾಚ್ ನಲ್ಲಿ ಒಟ್ಟು 225 ಮಂದಿ ತರಬೇತಿಗೆ ಆಯ್ಕೆಯಾಗಿದ್ದರು. ಅದರಲ್ಲಿ ದ.ಕ.ಜಿಲ್ಲೆಯಿಂದ ಒಬ್ಬರೇ ಮಹಿಳಾ ಎಸ್.ಐ.ಅಗಿ ಅಯ್ಕೆಯಾಗಿದ್ದರು.‌

ಅತೀ ಹೆಚ್ಚು ಕೇಸುಗಳ ಮೂಲಕ ಯಾವಗಲೂ ಸದಾ ಸುದ್ದಿ ಯಲ್ಲಿರುವ ಬಂಟ್ವಾಳ ನಗರ ಠಾಣೆಯಲ್ಲಿ ಖಡಕ್ ಎಸ್.ಐ. ಚಂದ್ರಶೇಖರ್ ಅವರ ಜೊತೆ ಪ್ರೋಬೆಶನರಿ ಅವಧಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.‌
ಇವರ ಆಗಮನಕ್ಕೆ ವೆಲ್ ಕಮ್ ಎನ್ನೋಣ.