Friday, September 20, 2024
ಸುದ್ದಿ

ಒಳಚರಂಡಿ ಸಮಸ್ಯೆ: ಶಾಸಕ ರಾಜೇಶ್ ನಾಯಕ್ ಸ್ಥಳಕ್ಕೆ ಭೇಟಿ – ಕಹಳೆ ನ್ಯೂಸ್

ಬಂಟ್ವಾಳ: ಪುರಸಭಾ ವ್ಯಾಪ್ತಿಯ ಮೊಡಂಕಾಪು ಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದೆ ರೋಗದ ಭೀತಿಯಲ್ಲಿರುವ ಈ ಭಾಗದ ಸಾರ್ವಜನಿಕರ ದೂರಿನ‌ ಹಿನ್ನಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಸಂಬಂಧಿಸಿದ ಅಧಿಕಾರಿಗಳ ಸಹಿತ ಸ್ಥಳಕ್ಕೆ ಭೇಟಿ ನೀಡಿದರು.

ಈ ಭಾಗದಲ್ಲಿ ನಿರ್ಮಾಣವಾದ ಖಾಸಗಿ ಪ್ಲಾಟ್ ಗಳಿಂದ ನೇರವಾಗಿ ಕೊಳಕು‌ನೀರು ಮತ್ತು ರಾತ್ರಿ ಹೊತ್ತಲ್ಲಿ ಟ್ಲಾಯೆಟ್ ನೀರನ್ನು ಪಂಪ್ ಮೂಲಕ ಮಳೆ ನೀರು ಹರಿದು ಹೋಗುವ ಕಣಿವೆಗೆ ಬಿಡಲಾಗುತ್ತಿದ್ದು ಜನರು ರೋಗದ ಭೀತಿಯಿಂದ ನರಳುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿನ ನಿವಾಸಿಗಳ ಬಾವಿಗೆ ಗಲೀಜು ನೀರು ಇಂಗುತ್ತಿದ್ದು ನೀರನ್ನು ಬಳಸಲಾಗುತ್ತಿಲ್ಲ , ಜೊತೆಗೆ ಇಲ್ಲಿನ ‌ನಿವಾಸಿಗಳಿಗೆ ತುರಿಕೆ ಮತ್ತು ಸಾಂಕ್ರಮಿಕ ರೋಗಗಳು ಬಂದಿದ್ದು ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ವಾಗದ ಹಿನ್ನೆಲೆಯಲ್ಲಿ ನಿನ್ನೆ ಶಾಸಕರ ಬಳಿ ಸಮಸ್ಯೆ ಹೇಳಿಕೊಂಡಿದ್ದಾರೆ.

ಜಾಹೀರಾತು

ಇವತ್ತು ಶಾಸಕರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ರಾಜೇಶ್ ನಾಯಕ್ ಅವರು ಶೀಘ್ರವಾಗಿ ಇವರಿಗೆ ಸಮಸ್ಯೆ ಪರಿಹರಿಸುವ ತಾತ್ಕಾಲಿಕ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು ಹಾಗೂ ಎಲ್ಲಾ ಪ್ಲಾಟ್ ಮಾಲೀಕರಿಗೆ ‌ನೋಟಿಸ್ ಜಾರಿ ಮಾಡಲು ಹೇಳಿದರು.

ಇನ್ನು ಮುಂದಿನ ದಿನಗಳಲ್ಲಿ ಪ್ಲಾಟ್ ಗಳಿಗೆ ಪರವಾನಿಗೆ ನೀಡುವಾಗ ಇಂತಹ ಸಮಸ್ಯೆಗಳು ಬರದಂತೆ ಎಚ್ಚರ ವಹಸಿ ಪರವಾನಿಗೆ ನೀಡಬೇಕು ಎಂದರು.

ಪುರಸಭಾ ಸದಸ್ಯ ಲೋಲಾಕ್ಷ, ಬಂಟ್ವಾಳ ಬಿಜೆಪಿ ಅದ್ಯಕ್ಷ ದೇವದಾಸ ಶೆಟ್ಟಿ, ಮಾಜಿ ಪುರಸಭಾ ಸದಸ್ಯರಾದ, ಜನಾರ್ಧನ ಬೊಂಡಾಲ, ಸುರೇಶ್ ಟೈಲರ್, ಪ್ರಮುಖರಾದ ಪ್ರಮೋದ್ ಕುಮಾರ್, ಸತೀಶ್ ಶೆಟ್ಟಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಪುರಾಣಿಕ್, ಒಳಚರಂಡಿ ಯೋಚನೆ ಅಧಿಕಾರಿ ರೇಖಾ, ಇಂಜಿನಿಯರ್ ಡೋಮೆನಿಕ್  ಡಿಮೆಲ್ಲೋ ಉಪಸ್ಥಿತರಿದ್ದರು.