Monday, January 20, 2025
ಸುದ್ದಿ

ಕುಕ್ಕೆ ಸುಬ್ರಹ್ಮಣ್ಯದ 400 ವರ್ಷ ಹಳೆಯ ಬ್ರಹ್ಮರಥಕ್ಕೆ ಕೊನೆಯ ಚಂಪಾಷಷ್ಠಿ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ವೇಳೆ ಸಹಸ್ರಾರು ಭಕ್ತರ ಸಮ್ಮುಖ ಶ್ರದ್ಧಾಭಕ್ತಿಯಿಂದ ಎಳೆಯುವ ಬ್ರಹ್ಮರಥಕ್ಕೆ 400 ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಈ ತೇರನ್ನು ಈ ಬಾರಿಯ ಜಾತ್ರೆಯಲ್ಲಿ ಕೊನೆಯ ಬಾರಿಗೆ ಎಳೆಯಲಾಗುತ್ತಿದ್ದು, ಬಳಿಕ ಅದು ಇತಿಹಾಸದ ಪುಟಗಳನ್ನು ಸೇರಲಿದೆ.

ದಕ್ಷಿಣ ಕನ್ನಡ ಜಿಲ್ಲೆ ದೇವಾಲಯಗಳ ತವರೂರು, ಈ ಪುಣ್ಯ ಭೂಮಿಯಲ್ಲಿ ಹೆಜ್ಜೆಗೊಂದರಂತೆ ದೇವಾಲಯಗಳು ಕಾಣಸಿಗುತ್ತದೆ, ಅಂತಯೇ ಸುಳ್ಯ ತಾಲೂಕಿನಲ್ಲಿರುವ ಸುಪ್ರಸಿದ್ಧ ದೇವಾಲಯಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಒಂದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಶ್ವರ ಪುತ್ರ ಸುಬ್ರಹ್ಮಣ್ಯ ದೇವರನ್ನು ನಾಗ ರೂಪದಲ್ಲಿ ಆರಾಧಿಸಲಾಗುತ್ತಿದೆ, ನಾಗಾರಾಧನೆ ಇಲ್ಲಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ಜೊತೆಗೆ ಆಶ್ಲೇಷ ಬಲಿ, ಸರ್ಪ ಸಂಸ್ಕಾರ, ನಾಗ ಪ್ರತಿಷ್ಠೆಯನ್ನ ಇಲ್ಲಿ ಕಾಣಬಹುದು. ಅಲ್ಲದೆ ಕುಮಾರಧಾರ ಪುಣ್ಯ ತೀರ್ಥಕ್ಕಾಗಿ ಸಹಸ್ರರು ಸಂಖ್ಯೆಯಲ್ಲಿ ಭಕ್ತರ ದಂಡೆ ಹರಿದು ಬರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂತಹ ಪುಣ್ಯ ಕ್ಷೇತ್ರದಲ್ಲಿ ಐತಿಹಾಸಿಕ ಹಿನ್ನಲೆ ಹೊಂದಿರುವ ಬ್ರಹ್ಮರಥ ಶಿಥಿಲಾವಸ್ಥೆಗೆ ತಲುಪಿದೆ. ಸುಮಾರು ೪೦೦ ವರ್ಷಗಳಿಂದ, ಸುಬ್ರಹ್ಮಣ್ಯನ ಸೇವೆಯನ್ನ ಮಾಡಿ ಮುಂದಿನ ದಿನಗಳಲ್ಲಿ ವಿಶ್ರಾಂತಿ ಪಡೆಯಲಿದೆ, ಈ ರಥ ತನ್ನ ಮುದಿ ವಯಸ್ಸಿಗೆ ತಲುಪಿದ್ದು ಬಹುತೇಕ ಚಿತ್ರಗಳು ಗೋಚರಿಸುತ್ತಿಲ್ಲ.

ಈ ಭಾರಿಯ ಜಾತ್ರೆಯಲ್ಲಿ ಕೊನೆಯದಾಗಿ ಸುಬ್ರಹ್ಮಣ್ಯನನ್ನ ಹೊತ್ತುಕೊಂಡು, ಸಾಹಸ್ರರು ಭಕ್ತ್ತಾರ ಸಮ್ಮುಖದಲ್ಲಿ ರಥ ಬೀದಿಯಲ್ಲಿ ಮೆರವಣಿಗೆ ನಡೆಸಲಿದೆ. ರಥ ಬೀದಿಯಲ್ಲಿ ಇದರ ಹೆಚ್ಚೆ ಈ ವರ್ಷವೆ ಕೊನೆ. ಇದರಿಂದಾಗಿ ರಥ ಬೀದಿಗಳು ಸ್ತಭ್ಧವಾಗಿ ಮಲಗಿವೆ, ಬೀದಿ ಬದಿಯ ಅಂಗಡಿ ಮುಂಗಟ್ಟುಗಳು ಕಳೆಗುಂದಿದಂತೆ ಭಾಸವಾಗುತ್ತದೆ.

ಆದ್ರೆ ಸುಬ್ರಹ್ಮಣ್ಯನ್ನ ಹೊತ್ತೊಯ್ಯಲು ಇದೀಗ ಹೊಸ ರಥ ಸನ್ನದ್ದವಾಗುತ್ತಿದೆ. ಸುಮಾರು ೧.೯೯ ಕೋಟಿ ವೆಚ್ಚದಲ್ಲಿ ಬ್ರಹ್ಮರಥ ಸಜ್ಜಾಗುತ್ತಿದ್ದು ಸುಬ್ರಹ್ಮಣ್ಯ ದೇವರು ಈ ರಥದಲ್ಲಿ ರಾರಾಜಿಸಲಿದ್ದಾರೆ. ಇನ್ನು ಮುಂದಿನ ಜಾತ್ರಾ ಮಹೋತ್ಸವಗಳಲ್ಲಿ ಹೊಸ ಹೆಜ್ಜೆ ಬರಲಿದೆ, ಅದೇ ಸ್ಯಂದನ ರಥ.

ಸ್ಯಂದನ ರಥದಲ್ಲಿ ಏನೇನಿರಲಿದೆ
ಇದೀಗ ಹೊಸ ರಥ ಪ್ರತಿಮಾಶಾಸ್ತ್ರ, ಚಿತ್ರಕಲೆ, ಜ್ಯಾಮಿತಿಕ ಅಂಶ, ಪೌರಾಣಿಕ ಸನ್ನಿವೇಶಗಳ ಹಿನ್ನೆಲೆ ತಿಳಿದ ಶಿಲ್ಪಿಗಳಿಂದ ಈ ರಥದ ರಚನೆಯಾಗಿದೆ. ವಿವಿಧ ಶಿಲ್ಪಶಾಸ್ತ್ರ ಗ್ರಂಥಗಳಲ್ಲಿ ಹೇಳಿರುವ ವಿಧಿ-ವಿಧಾನ, ನಿಯಮ ಅನುಸರಿಸಿ ತಯಾರಾಗಿದ್ದು, ಆರು ಚಕ್ರ ಹೊಂದಿರುವ ಬ್ರಹ್ಮರಥ ಶಾಸ್ತ್ರೀಯವಾಗಿ ಸ್ಯಂದನ ರಥವಾಗಿದೆ.

ಅಡಿಪಾಯ, ಅಡಿಸ್ಥಾನ, ಮಂಟಪ, ಗೋಪುರ, ಶಿಖರ ಇವು ರಥದ ಪ್ರಮುಖ ಭಾಗಗಳಾಗಿದ್ದು.. ಅಡಿಪಾಯದಿಂದ ಮಂಟಪದವರೆಗಿನ ಒಟ್ಟು ಭಾಗ ಸ್ಥಿರ ರಥ. ಚಕ್ರದ ಎತ್ತರ ೮ ಅಡಿ ೬ ಅಂಗುಲ. ಒಂದು ಚಕ್ರದಲ್ಲಿ ೫ ಬೃಹತ್ ಮರದ ತುಂಡುಗಳಿವೆ.

ದೇಗುಲದಲ್ಲಿ ಪ್ರಶ್ನೆ ಹಾಕಿ ಕೇಳಿದಾಗ ಈಗಿನ ಬ್ರಹ್ಮರಥ ಶಿಥಿಲಾವಸ್ಥೆಗೆ ತಲುಪಿದೆ, ನೂತನ ರಥ ನಿರ್ಮಾಣವಾಗಬೇಕು ಎಂದು ಕಂಡುಬಂದಿತ್ತು. ಅದರಂತೆ ಬಿಡದಿ ರಿಯಾಲಿಟಿ ವೆಂಚರ್ ಫೋರ್ ಗ್ರೂಪ್ ಸಂಸ್ಥೆಯ ಪಾಲುದಾರರಾದ ಮುತ್ತಪ್ಪ ರೈ ಮತ್ತು ಅಜಿತ್ ರೈ ನೂತನ ಬ್ರಹ್ಮರಥ ನಿರ್ಮಿಸಿಕೊಡುತ್ತಿದ್ದಾರೆ.

ಕೋಟೇಶ್ವರದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಬ್ರಹ್ಮರಥ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದಾರೆ. ಮುಂದಿನ ಮಾರ್ಚ್ ತಿಂಗಳಲ್ಲಿ ನೂತನ ಬ್ರಹ್ಮರಥ ಸಿದ್ದಗೊಂಡು ದೇಗುಲದ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆಗೊಳ್ಳಲಿದೆ. ಈ ಮೂಲಕ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹಳೆ ರಥ ತನ್ನ ಕಾರ್ಯವನ್ನ ಮುಗಿಸಿ ಇತಿಹಾಸ ಪುಟಗಳನ್ನ ಸೇರಲಿದ್ದು, ಸ್ಯಂದನ ಬ್ರಹ್ಮರಥ ಚಂಪಾಷಷ್ಠಿ ಸಂದರ್ಭದಲ್ಲಿ ರಥ ಬೀದಿಯಲ್ಲಿ ಹೆಜ್ಜೆ ಹಾಕಲಿದೆ.