Monday, January 20, 2025
ಸುದ್ದಿ

ಪುತ್ತೂರಿನ ಕಾರಂತ ಸ್ವಿಮ್ಮಿಂಗ್ ಪೂಲ್ ನಲ್ಲಿ ರಾಜ್ಯ ಮಟ್ಟದ ಶಾರ್ಟ್ ಕೋರ್ಸ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆ – ಕಹಳೆ ನ್ಯೂಸ್

ಪುತ್ತೂರು: ಕರ್ನಾಟಕ ಸ್ವಿಮೀಂಗ್ ಆಕಾಡೆಮಿ‌ ಮತ್ತು ಅಕ್ವೇಟಿಕ್ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ 19 ನೇ ರಾಜ್ಯ ಮಟ್ಟದ ಶಾರ್ಟ್ ಕೋರ್ಸ್ ಸ್ವಿಮ್ಮಿಂಗ್ ಚಾಂಪಿಯನ್ ಶೀಪ್ ಸ್ಪರ್ಧೆಯನ್ನು ಪುತ್ತೂರಿನ ಕಾರಂತ ಸ್ವಿಮ್ಮಿಂಗ್ ಪೂಲ್ ನಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯಲಿದ್ದು ಕಾರ್ಯಕ್ರಮವನ್ನು ಪುತ್ತೂರಿನ ಸಹಾಯಕ ಆಯುಕ್ತರಾದ ಹೆಚ್.ಕೆ ಕೃಷ್ಣ ಮೂರ್ತಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಕಾರಂತರ ಸ್ಥಳದಲ್ಲಿ ಈ ಸ್ಪರ್ದೆ ನಡೆಯುತ್ತಿರುವುದು ಪುತ್ತೂರಿನ ಜನತೆಗೆ ಹೆಮ್ಮೆಯ ವಿಚಾರ ಎಂದರು. ತಾಲೂಕು ಮಟ್ಟದಲ್ಲಿ ಇಷ್ಟು ಸುಸಜ್ಜಿತವಾದ ಈಜುಕೊಳ ಇರುವುದು ಪುತ್ತೂರಿನ ಕಾರಂತರ ಈಜುಕೊಳ ಮಾತ್ರ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ 2014 ರ ನಂತರ ಅನೇಕ ಕ್ರೀಡ ಪ್ರತಿಭೆಗಳು ಹೊರಬರುತ್ತಿದ್ದು ಒಲಂಪಿಕ್ ಸೇರಿದಂತೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮಕ್ಕಳು ಮಿಂಚುತ್ತಿದ್ದಾರೆ ಅವರಿಗೆ ಸರಿಯಾದ ರೀತಿಯಲ್ಲಿ ಪ್ರೋತ್ಸಾಹ ನೀಡಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ತಾಲೂಕು ಮಟ್ಟದಲ್ಲಿ ಈಜಿದ ಮಕ್ಕಳು ಒಳ್ಳೆಯ ಕ್ರೀಡಾ ಪಟುಗಳಾಗಿ‌ ಮಿಂಚಲಿ. ಪುತ್ತೂರಿನ ಬಾಲವನದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಈಜು ಸ್ಪರ್ದೆ ಪುತ್ತೂರಿನ ಜನತೆಯಲ್ಲಿ ತುಂಬಾ ಖುಷಿಯು ವ್ಯಕ್ತವಾಗಿದೆ. ಇದರಿಂದ ಕಾರಂತರ ಆತ್ಮವು ಪ್ರಪುಲ್ಲವಾಗುತ್ತದೆ ಎಂದು ಹೇಳಿದರು.

ಕೆಎಸ್‌ಎ ಚೇರ್‌ಮೆನ್ ನೀಲ್‌ಕಂಠ ರಾವ್ ಜಗದಗಲ, ಕೆಎಸ್‌ಎ ಅಧ್ಯಕ್ಷರಾದ ಗೋಪಾಲ್ ಬಿ. ಹೊಸೂರ್ ಕಾರ್ಯದರ್ಶಿ ಸತೀಶ್ ಕುಮಾರ್ ಎಮ್ ಮುಂತಾದವರು ಉಪಸ್ಥಿತರಿದ್ದರು.