Recent Posts

Sunday, January 19, 2025
ಸುದ್ದಿ

ಎಟಿಎಂನಲ್ಲಿ ಹೊಸ ಟೆಕ್ನಾಲಜಿ ಅಳವಡಿಕೆ: ಕಾರ್ಡ್​ ಸ್ವೈಪ್ ಮಾಡದೆ ಹಣ ಪಡೆಯುವುದು ಹೇಗೆ? – ಕಹಳೆ ನ್ಯೂಸ್

ಡೆಬಿಟ್ ಕಾರ್ಡ್​ ಬಳಕೆದಾರರು ಇನ್ನು ಮುಂದೆ ಹಣ ವಿತ್​ಡ್ರಾ ಮಾಡಲು ಎಟಿಎಂನಲ್ಲಿ ಕಾರ್ಡ್​ ಸ್ವೈಪ್ ಮಾಡಬೇಕೆಂದಿಲ್ಲ. ಮೊಬೈಲ್ ಮೂಲಕವೇ ಸ್ಕ್ಯಾನ್ ಮಾಡಿ ಹಣ ಪಡೆಯಬಹುದಾಗಿದೆ. ಇದಕ್ಕಾಗಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದ್ದು, ಶೀಘ್ರದಲ್ಲೇ ಎಲ್ಲ ಪ್ರಮುಖ ಎಟಿಎಂ ಯಂತ್ರಗಳಲ್ಲಿ ಈ ಸೌಲಭ್ಯ ದೊರೆಯಲಿದೆ.

ಸಾಮಾನ್ಯವಾಗಿ ಡಿಜಿಟಲ್​ ಪೇನಲ್ಲಿ ಬಳಸಲಾಗುವ ಕ್ಯೂಆರ್ ಕೋಡ್​ನ್ನು ಎಟಿಎಂಗಳಲ್ಲಿ ಅಳವಡಿಸಲಾಗುತ್ತದೆ. ಅಲ್ಲದೆ ಎಟಿಎಂ ಬಳಕೆದಾರರಿಗೆ ಹೊಸದೊಂದು ಆ್ಯಪ್ ಕೂಡ ಲಭ್ಯವಾಗಲಿದ್ದು, ಈ ಅಪ್ಲಿಕೇಶನ್​ ಮೂಲಕ ಎಟಿಎಂ ಯಂತ್ರದಲ್ಲಿರುವ ಕ್ಯೂಆರ್​ ಕೋಡ್​ನ್ನು ಸ್ಕ್ಯಾನ್ ಮಾಡಿ ಹಣ ವಿತ್​ಡ್ರಾ ಮಾಡಿಕೊಳ್ಳಬಹುದು. ಶೀಘ್ರದಲ್ಲೇ ಯುಪಿಐ ಆ್ಯಪ್ ಮೂಲಕ ವಹಿವಾಟು ನಡೆಸುತ್ತಿರುವವರಿಗೆ ಈ ಸೌಲಭ್ಯ ದೊರೆಯಲಿದೆ ಎಂದು ತಿಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ದೇಶದ ಪ್ರಮುಖ ಬ್ಯಾಂಕುಗಳಿಗೆ ಎಟಿಎಂ ಯಂತ್ರಗಳನ್ನು ಪೂರೈಸುತ್ತಿರುವ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜಿ ಹೊಸ ಎಟಿಎಂಗಳಲ್ಲಿ ಕ್ಯೂಆರ್​ ಕೋಡ್ ಅಳವಡಿಸಲು ನಿರ್ಧರಿಸಿದ್ದು, ಇದಕ್ಕಾಗಿ ನ್ಯಾಷನಲ್ ಕಾರ್ಪೋರೇಷನ್ ಆಫ್ ಇಂಡಿಯಾದ ಅನುಮತಿಯನ್ನು ನಿರೀಕ್ಷಿಸಲಾಗುತ್ತಿದೆ. ಈ ಬಳಿಕ ಎಟಿಎಂ ನಲ್ಲಿ ಕಾರ್ಡ್​ ಸ್ವೈಪ್ ಮಾಡದೇ ಹಣವನ್ನು ಪಡೆದುಕೊಳ್ಳುವ ಸೌಲಭ್ಯ ಒದಗಿ ಬರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೊಸ ತಂತ್ರಜ್ಞಾನದ ಮೂಲಕ ಎಟಿಎಂ ವಂಚನೆಗಳನ್ನು ತಡೆಯಲು ಬ್ಯಾಂಕುಗಳು ಮುಂದಾಗಿದ್ದು, ಹೀಗಾಗಿ ಕ್ಯೂಆರ್ ಕೋಡ್ ವಿತ್​ಡ್ರಾ ಸೌಲಭ್ಯವನ್ನು ಎಲ್ಲ ಬ್ಯಾಂಕುಗಳು ಒಪ್ಪಿಕೊಳ್ಳಲಿದೆ ಎನ್ನಲಾಗಿದೆ. ಇದರಿಂದ ಡೆಬಿಟ್ ಕಾರ್ಡ್​ ಬಳಕೆ ವೇಳೆ ನಡೆಯುತ್ತಿರುವ ವಂಚನೆ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ ಎಂದು ಎಜಿಎಸ್ ಕಂಪೆನಿ ಹೇಳಿಕೊಂಡಿದೆ.