Saturday, January 11, 2025
ಸುದ್ದಿ

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವೈಭವದ ರಜತ ಸಂಭ್ರಮ – ಕಹಳೆ ನ್ಯೂಸ್

ಪುತ್ತೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವೈಭವದ ರಜತ ಸಂಭ್ರಮ ಕಾರ‍್ಯಕ್ರಮದಲ್ಲಿ ಕಾಣಿಯೂರು ಪೇಟೆಯಿಂದ ಪ್ರಗತಿ ವಿದ್ಯಾಸಂಸ್ಥೆಯವರೆಗೆ ವೈಭವದ ಮೆರವಣಿಗೆ ನಡೆಯಿತು. ಇದು ಹೊಸದಾದ ಇತಿಹಾಸವನ್ನೆ ಸೃಷ್ಟಿಸಿತು.

ಸಂಸದ ನಳೀನ್ ಕುಮಾರ್ ಕಟೀಲ್ ಕಾಣಿಯೂರು ಪೇಟೆಯಲ್ಲಿ ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದ್ರು. ಪುತ್ತೂರು ಶಾಸಕ ಸಂಜೀವ ಮಠಂದೂರು ಸೋಲಾರ್ ಪರ‍್ಕ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸ್ಮರ‍್ಟ್ ಕ್ಲಾಸ್ ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಸಂಜೆ ಸಮಾರಂಭ ಸಮಾರೋಪ ಕಾರ‍್ಯಕ್ರಮ ನಡೆಯಿತು. ಸಭೆಯನ್ನುದ್ದೆಶಿಸಿ ಮಾತನಾಡಿದ ಶ್ರೀ ಗುರುದೇವಾನಂದ ಸ್ವಾಮೀಜಿ, ಆಧ್ಯಾತ್ಮ ಶಕ್ತಿ ಭಾರತದ ಜೀವಾಳ. ರ‍್ಮ, ಸಂಸ್ಕೃತಿ ಜೊತೆಜೊತೆಗೆ ಸಾಗುತ್ತಿರುವ ವಿಚಾರಗಳಾಗಿದ್ದು, ಇಂದಿನ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣದ ಅಗತ್ಯವಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ದಕ್ಷಿಣ ಕನ್ನಡ ಜಿಲ್ಲ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ್ ಶೆಟ್ಟಿ ಮಾತನಾಡಿ, ಶಿಕ್ಷಣ ಸಂಸ್ಥೆಗಳ ಜೊತೆಗೆ ಪೋಷಕರು ತೊಡಗಿಸಿಕೊಂಡಾಗ ಅಭಿವೃದ್ಧಿ ಸಾಧ್ಯ ಅಂತ ಹೇಳಿದರು.

ಇದರ ಜೊತೆಗೆ ಪರ‍್ವತಿ ಗಣೇಶ್ ಹೊಸಮೂಲೆ ಇವರಿಂದ ಸಂಗೀತ ಸುಧೆ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಿತು.

ಇನ್ನು ಈ ಸಂದರ್ಬ ತಾಲೂಕು ಪಂಚಾಯತ್ ಅಧ್ಕಕ್ಷೆ ಭವಾನಿ ಚಿದಾನಂದ, ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ಜಗನ್ನಾಥ್ ರೈ ನುಳಿಯಾಲು, ಅಕ್ಷರ ದಾಸೋಹ ಸಹಾಯಕ ನರ‍್ದೇಶಕ ಸುರೇಶ್ ಕುಮಾರ್, ಬೆಳ್ಳಿಹಬ್ಬ ಸಮಿತಿ ಪ್ರದಾನ ಕರ‍್ಯರ‍್ಶಿ ಸುಜಿತ್ ರೈ ಪಟ್ಟೆ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಸಂಚಾಲಕ ಜಯಸರ‍್ಯ ರೈ ಮಾದೋಡಿ ಸ್ವಾಗತಿಸಿ, ಮುಖ್ಯ ಶಿಕ್ಷಕ ಗಿರಿಶಂಕರ್ ಸುಲಾಯ ವಂದಿಸಿದರು.