Recent Posts

Monday, January 20, 2025
ಸುದ್ದಿ

ಸಿದ್ದಗಂಗಾ ಶ್ರೀಗಳ‌ ಆರೋಗ್ಯದ ಬಗ್ಗೆ ಜನರಿಗೆ‌ ಆತಂಕ ಬೇಡ: ಸಿಎಂ – ಕಹಳೆ ನ್ಯೂಸ್

ಚಿಕ್ಕಮಗಳೂರು: ಸಿದ್ದಗಂಗಾ ಶ್ರೀಗಳ‌ ಆರೋಗ್ಯದ ಬಗ್ಗೆ ಜನರಿಗೆ‌ ಆತಂಕ ಬೇಡ. ಅವರಿಗೆ ಬಿಟ್ಟು-ಬಿಟ್ಟು ಸ್ವಲ್ಪ ಜ್ವರ ಬರ್ತಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಶೃಂಗೇರಿಯಲ್ಲಿ ಸಿಎಂ ಕುಮಾರಸ್ವಾಮಿ‌ ಹೇಳಿದ್ದಾರೆ.

ಅವರ‌ ಆರೋಗ್ಯದ ಸಂಬಂದ ಪಿನ್ ಟು ಪಿನ್ ಮಾಹಿತಿ ತರಿಸಿಕೊಳ್ತಿದ್ದೇನೆ. ಮಠದ ಕಿರಿಯ ಸ್ವಾಮೀಜಿ‌ ಜೊತೆ‌ ನಿರಂತರ‌‌ ಸಂಪರ್ಕದಲ್ಲಿದ್ದೇನೆ ಮತ್ತು ಹೆಚ್ಚಿನ ಚಿಕಿತ್ಸೆ ಅನಿವಾರ್ಯತೆ‌ ಇದ್ರೆ ಆಸ್ಪತ್ರೆ‌ ದಾಖಲು ಮಾಡಲು ಹೇಳಿದ್ದೇನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯದ‌ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸರಿಗೆ‌ ಎಲ್ಲಾ ರೀತಿಯ ಸಹಕಾರಕ್ಕೆ ಸೂಚಿಸಿದ್ದೇನೆ. ಯಾರೂ ಗಾಬರಿಪಡುವ ಅಗತ್ಯವಿಲ್ಲ. ಅವರು ನಮ್ಮೊಂದಿಗೆ‌ ಇನ್ನೂ ಇರಬೇಕೆಂದು‌ ಶಾರದಾಂಭೆಗೆ‌ ಬೇಡಿಕೊಳ್ತೇನೆ ಎಂದು ಸಿಎಂ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು