Recent Posts

Monday, January 20, 2025
ಸುದ್ದಿ

ಉಳ್ಳಾಲ ಹೊಯಿಗೆ ಸಮೀಪದ ನದಿ ನೀರಿನಲ್ಲಿ ಅಪರಿಚಿತ ಶವ ಪತ್ತೆ – ಕಹಳೆ ನ್ಯೂಸ್

ಮಂಗಳೂರು: ನೇತ್ರಾವತಿ ನದಿ ತಟದ ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಉಳ್ಳಾಲ ಹೊಯಿಗೆ ಸಮೀಪದ ನದಿ ನೀರಿನಲ್ಲಿ ಸುಮಾರು 45 ರಿಂದ 50 ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ಕೊಳೆತ ಸ್ಥಿತಿಯಲ್ಲಿ ಶವ ದೊರೆತಿದೆ.

ಮೃತ ವ್ಯಕ್ತಿ ಯು ಕಪ್ಪು ಬಣ್ಣದ ನಕ್ಷತ್ರ ಗಳ ಚಿತ್ರ ವಿರುವ ತುಂಬು ತೋಳಿನ ಮಡಿಚಿರುವ ಶರ್ಟ್ ಮತ್ತು ಕಂದು ಬಣ್ಣದ ಪ್ಯಾಂಟ್ ಧರಿಸಿದ್ದು ಇದಕ್ಕೆ ಕಪ್ಪು ಬಣ್ಣದ ಬೆಲ್ಟ್ ಹಾಕಲಾಗಿದೆ. ಈತನ ಪ್ಯಾಂಟ್ ಜೇಬಿನಲ್ಲಿ ಮೆಟ್ರೋ ಬೀಡಿ ಪಾಕೆಟ್ ದೊರೆತ್ತಿದ್ದು, ಒಂದು ಕಾಲಿನಲ್ಲಿ ಕಟ್ಟುವ ಚಪ್ಪಲಿ (Belt slipper) ಇರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ಯಾಂಟ್ ಮತ್ತು ಶರ್ಟ್ ರೆಡಿಮೇಡ್ ಆಗಿರುತ್ತದೆ. ಮೃತ ಶರೀರ ವನ್ನು ವೆನ್ಲಾಕ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು ಮೃತ ವ್ಯಕ್ತಿ ಚಹರೆಯ ಬಗ್ಗೆ ಮಾಹಿತಿ ಇದ್ದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆ 08242220529/ ಪೊಲೀಸ್ ಕಂಟ್ರೋಲ್ ರೂಮ್ 08242220800/100 ಗೆ ಮಾಹಿತಿ ನೀಡಬೇಕಾಗಿ ಕೋರಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು