Friday, September 20, 2024
ಸುದ್ದಿ

ವಾಹನ ಸವಾರರಿಗೆ ಇ-ದಾಖಲೆಗೆ ಅವಕಾಶ: ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು – ಕಹಳೆ ನ್ಯೂಸ್

ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಡಿಜಿಟಲ್ ಟಚ್ ಗೆ ಇದೀಗ ವಾಹನ ಪರವಾನಗಿಯೂ ಸೇರಿದ್ದು, ಇನ್ನು ಮುಂದೆ ವಾಹನ ಸವಾರರು ಇ-ದಾಖಲೆಯನ್ನು ಪೊಲೀಸರಿಗೆ ತೋರಿಸಬಹುದು ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.

ತಮಿಳುನಾಡು ರಾಜ್ಯ ಸಂಚಾರಿ ಯೋಜನಾ ಎಡಿಜಿಪಿ ಹೊರಡಿಸಿದ್ದ ಮಾರ್ಗಸೂಚಿಯಲ್ಲಿ, ಎಲ್ಲ ಚಾಲಕರು ಕಡ್ಡಾಯವಾಗಿ ಹಾರ್ಡ್ ಕಾಪಿ ದಾಖಲೆಗಳನ್ನು ಒದಗಿಸಬೇಕು. ಇ-ದಾಖಲೆಗಳನ್ನು ಅರ್ಹಗೊಳಿಸುವುದಿಲ್ಲ ಎಂದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದನ್ನು ಪ್ರಶ್ನಿಸಿ ಟ್ರಾಫಿಕ್ ರಾಮಸ್ವಾಮಿ ಹಾಗೂ ಲಾರಿ‌ ಮಾಲೀಕರ ಸಂಘಟನೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಚಾಲಕರು ವಾಹನ ಪರವಾನಗಿ, ವಿಮಾ ದಾಖಲೆ ಸೇರಿದಂತೆ ವಾಹನದ ಯಾವುದೇ ದಾಖಲೆಯನ್ನಾದರೂ ಎಲೆಕ್ಟ್ರಾನಿಕ್ ಮಾದರಿಯಲ್ಲಿ ತೋರಿಸಿದರೆ ಅದನ್ನು ಊರ್ಜಿತಗೊಳಿಸಬೇಕು ಎಂದು ಹೇಳಿದೆ.

ಜಾಹೀರಾತು

ಈ ಸಂಬಂಧ ಈಗಾಗಲೇ ಕೇಂದ್ರ ಸರಕಾರ ಇ-ದಾಖಲೆಯನ್ನು ತೋರಿಸಲು ತಿದ್ದುಪಡಿ ವಿಧೇಯಕ ಮಂಡಿಸಿರುವುದರಿಂದ, ಹಾರ್ಡ್ ಕಾಪಿಯನ್ನೇ ತೋರಿಸಬೇಕು ಎನ್ನಲು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್, ಸಾರ್ವಜನಿಕರು ಸಂಚಾರಿ ಪೊಲೀಸರಿಗೆ ದಾಖಲೆಗಳನ್ನು ಹಾರ್ಡ್ ಕಾಪಿ ಅಥವಾ ಇ-ದಾಖಲೆ ಮಾದರಿಯಲ್ಲಿ ತೋರಿಸಲು ಅವಕಾಶ ನೀಡಬೇಕು ಎಂದು ಹೇಳಿ ಅರ್ಜಿ ಇತ್ಯರ್ಥಗೊಳಿಸಿದೆ.