Saturday, November 23, 2024
ಸುದ್ದಿ

ದಕ್ಷಿಣ ಭಾರತದಲ್ಲಿ ವಾಯುವಿನ ಗುಣಮಟ್ಟ ಕುಸಿತ: ಆತಂಕ ಸೃಷ್ಟಿಸುತ್ತಿರುವ ಪೊಲ್ಯೂಷನ್ ಸಮಸ್ಯೆ – ಕಹಳೆ ನ್ಯೂಸ್

ದಿನಂದಿಂದ ದಿನಕ್ಕೆ ಮುನುಕುಲವನ್ನ ವಾಯುಮಾಲಿನ್ಯ ಕಂಗೆಡಿಸುತ್ತಿದೆ. ಮಾನವನೆ ಕಾರಣವಾದ ವಾಯುಮಾಲಿನ್ಯ ಅನೇಕ ರೋಗಗಳು ಸೃಷ್ಠಿಸಿ ಮನುಜ ಕುಲವೆ ನರಳುವಂತೆ ಮಾಡ್ತಿದೆ. ದಕ್ಷಿಣ ಭಾರತದಲ್ಲಿ ವಾಯುವಿನ ಗುಣಮಟ್ಟ ಕುಸಿತಾ ಇರೋದು ಎಲ್ಲೆಡೆ ಆತಂಕ ಸೃಷ್ಠಿ ಮಾಡ್ತಿದೆ.

ಈ ಪ್ರದೇಶ ಯಾಕಿಷ್ಟು ಮಂಜಿನಿಂದ ಕೂಡಿದೆ ಅಂತ ತಿಳ್ಕೋಬೇಡಿ. ಇದು ಮಂಜಿನಂತಿರುವ ವಿಷಗಾಳಿ. ಮಾನವ ಹಣದ ದುರಾಸೆಯಿಂದ ವಿಷ ಅನಿಲ ಕಾರುವ ದೊಡ್ಡ ದೊಡ್ಡ ಕೈಗಾರಿಕೆಗಳ ಕಾರ್ಖಾನೆಗಳನ್ನು ನಿರ್ಮಿಸಿ ಇಡೀ ಭೂ ಪ್ರದೇಶದಲ್ಲಿ ವಿಷಯಕ್ತ ಗಾಳಿ ಹರಡುವಂತೆ ಮಾಡ್ತ ಇದ್ದಾನೆ. ಇದರಿಂದ ಮಾರಕ ರೋಗ ಹರಡಿ ಅದೆಷ್ಟೋ ಜನ ಸಾವು ಬದುಕಿನ ನಡುವೆ ಹೋರಾಟ ನಡೆಸ್ತ ಇದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಖಾನೆಗಳ ಹೊಗೆ ಅಷ್ಟೆ ಅಲ್ಲದೆ ಮನೆಯಲ್ಲಿ ಬಳಸುವ ಸೌದೆ ಓಲೆಯಿಂದ ಕೂಡ ಸಾವು ಸಂಭವಿಸುತ್ತದೆ. ಹೌದು ಮನೆಯಲ್ಲಿ ಬಳಸುವ ಸೌದೆ ಓಲೆಯಿಂದ ಬರುವ ಹೊಗೆಯು ಕೂಡ ಮಾರಕ ರೋಗವನ್ನು ಉಂಟುಮಾಡುತ್ತದೆ. ಕರ್ನಾಟಕ ರಾಜ್ಯದಲ್ಲಿ ಸರಿಯಾಗಿ ಅಡುಗೆ ಅನಿಲ ಲಭ್ಯತೆ ಇಲ್ಲದೆ ಇರುವುದು ಇದಕ್ಕೆ ಕಾರಣ. ಒಟ್ಟಾರೆಯಾಗಿ 42.8% ಜನರ ಪಾಲಿಗೆ ಸೌದೆ ಒಲೆಗಳೆ ಆದಾರವಾಗಿದೆ.

ಉಸಿರಾಟ ಸಂಭಂಧಿತ ರೋಗಗಳು, ಸೊಂಕುಗಳು, ಹೃದಯಘಾತ, ಪಾರ್ಶ್ವವಾಯು, ಮಧುಮೇಹ, ಶ್ವಾಸಕೋಶದ ಕ್ಯಾನ್ಸರ್, ಇವೆಲ್ಲಾ ರೋಗಕ್ಕೆ ಮುಖ್ಯ ಕಾರಣ ವಿಷ ಅನಿಲ. ವಾಯು ಮಾಲಿನ್ಯದಿಂದ ಅಪಾರ ಸಾವು ನೋವು ಸಂಭವಿಸಿದ್ರು ಜನರು ಪ್ರಜ್ಞಾಹೀನರಂತಿದ್ದಾರೆ. ಇನ್ನಾದರೂ ಜನರು ಇದರ ಕಾರಣದಿಂದ ಉಂಟಾಗುವ ರೋಗಕ್ಕೆ ಬಲಿಯಾಗದಿರಲಿ ಅನ್ನೋದೆ ನಮ್ಮ ಆಶಯ.
ರಾಜೇಂದ್ರ ಶೆಣೈ ನ್ಯೂಸ್ ಡೆಸ್ಕ್ ಕಹಳೆ ನ್ಯೂಸ್