ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಎಂದರೆ ಎಲ್ಲಿಲ್ಲದ ಅಕ್ಕರೆ, ಅಭಿಮಾನವನ್ನು ಹೊಂದಿದ್ದ ಇಲ್ಲೊಬ್ಬ ಅಭಿಮಾನಿಗೆ ತನ್ನ ಮದುವೆಗೆ ಗಣೇಶ್ ಸಮ್ಮುಖದಲ್ಲಿ ನಡೆಯಬೇಕು. ಅವರು ಹಾರೈಸಬೇಕು ಎಂಬ ಮಹದಾಕಾಂಕ್ಷೆಯನ್ನು ಹೊಂದಿದ್ದ. ಆದರೆ, ಕೋಟಿಯಲ್ಲಿ ತಾನೊಬ್ಬ ಅಭಿಮಾನಿ ನನ್ನ ಮಾತಿಗೆ ಬೆಲೆಕೊಟ್ಟು ಬರುತ್ತಾರಾ ಎಂದು ಅಂಜಿಕೊಂಡು ಸಮ್ಮನಾಗಿದ್ದ.
ಗಣೇಶ್ ಎಂದರೆ ಹುಚ್ಚು ಅಭಿಮಾನವನ್ನು ಹೊಂದಿದ್ದ ಈತನ ಬಗ್ಗೆ ಗೋಲ್ಡನ್ ಸ್ಟಾರ್ಗೆ ಆಗೂ ಹೇಗೋ ವಿಷಯ ತಿಳಿಯಿತು. ತನ್ನ ಅಸ್ಟಿಸ್ಟೆಂಟ್ ಮೂಲಕ ಈ ವಿಷಯ ತಿಳಿದ ಗಣೇಶ್ ಕಡೆಗೆ ಸಿನಿಮಾ ಚಿತ್ರೀಕರಣ ಸೆಟ್ನಿಂದ ನೇರವಾಗಿ ಮದುವೆ ಮಂಟಪಕ್ಕೆ ಹೋಗಿ ಅಭಿಮಾನಿಗೆ ಶಾಕ್ ನೀಡುವ ಜೊತೆ ಆತನ ಆಸೆ ಪೂರೈಸಿದ್ದಾರೆ.
ನಾಯಂಡಹಳ್ಳಿಯಲ್ಲಿ ನಡೆಯುತ್ತಿದ್ದ ಈ ಮದುವೆ ವಿಷಯ ತಿಳಿದ ತಕ್ಷಣ ಹಿಂದೂ ಮುಂದೆ ಯೋಚಿಸದೆ ಗಣೇಶ್ ಹೋಗಿದ್ದಾರೆ. ನೂತನ ವಧುವರರಿಗೆ ಆಶೀರ್ವದಿಸಿದ್ದು, ಅವರ ಅಭಿಮಾನದಿಂದಲೇ ನಾವು ಎಂದು ಸ್ಪಷ್ಟಪಡಿಸಿದ್ದಾರೆ.