Sunday, November 24, 2024
ಸುದ್ದಿ

ತ್ರಿಪಕ್ಷೀಯ ಹೋರಾಟಕ್ಕೆ ಸಾಕ್ಷಿಯಾಗಲಿದೆ ತೆಲಂಗಾಣ – ಕಹಳೆ ನ್ಯೂಸ್

ತೆಲಂಗಾಣದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯು ರಣರಂಣಗವನ್ನು ಸೃಷ್ಟಿಸಿದ್ದು ಮಾತ್ರವಲ್ಲದೆ ಟ್ರೈಆ್ಯಂಗಲ್ ಕಾಂಪಿಟೇಶನ್ ಜೋರಾಗಿಯೇ ಇದೆ. ಒಂದು ಕಡೆಯಲ್ಲಿ ಟಿಆರ್‍ಎಸ್‍ನ ಸಾಧನೆ, ಕಾಂಗ್ರಸ್‍ನ ಭರವಸೆಯ ಮಾತು, ಬಿಜೆಪಿಯ ಪ್ಲಾನ್‍ಗಳು ಇಲ್ಲಿ ವರ್ಕೌಟ್ ಆಗುತ್ತಾ.

199 ಸ್ಥಾನಗಳ ವಿಧಾನಸಭಾ ಚುನಾವಣೆಯು ಮೂರು ಪಕ್ಷಗಳ ನಡುವೆ ಸಖತ್ ಫೈಟ್ ಕ್ರೀಯೇಟ್ ಮಾಡಿರೋದಂತೂ ಸುಳ್ಳಲ್ಲ. ಒಂದು ಕಡೆ ಕೇಂದ್ರ ಆಡಳಿತ ರೂಢ ಬಿಜೆಪಿ, ತೆಲಂಗಾಣದಲ್ಲಿ ಕಮಲ ಬಾವುಟ ಹಾರಟ ನಡೆಸಲೇಬೇಕೆಂದು ಪಣ ತೊಟ್ಟು ನಿಂತಿದ್ರೆ. ಇತ್ತ ಕೈ ಪಾರ್ಟಿಯು ಧರ್ಮದಲ್ಲಿ ಮತದಾರರಿಗೆ ಭರವಸೆ ನೀಡಿ ಮತವನ್ನು ಅಧಿಕ ಮತ ಪಡೆಯಲು ನಿರ್ಧರಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂತೆಯೇ ಸೆಪ್ಟೆಂಬರ್‍ನಲ್ಲಿ ವಿಧಾನಸಭೆ ವಿಸರ್ಜನೆ ಮಾಡಿದ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷವು ತನ್ನ ಹಳೆಯ ಸಾಧನೆಯ ಜೊತೆಗೆ ಮತ್ತಷ್ಟು ಜನರಿಗೆ ಹತ್ತಿರವಾಗಲು ನಿರ್ಧರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತೆಲಂಗಾಣದಲ್ಲಿ ತ್ರಿಪಕ್ಷಗಳು ಅಧಿಕಾರಕ್ಕೆ ಬರಲು ಹಣಾಹಣಿ ನಡೆಸುತ್ತಿದ್ದು, ಇಂದು ಮತದಾರರು ಎಲ್ಲ ಅಭ್ಯರ್ಥಿಗಳ ಹಣೆ ಬರಹವನ್ನು ನಿರ್ಧರಿಸಲಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಶುರುವಾದ ಮತದಾನ ಪ್ರಕ್ರಿಯೆಯು ಸಂಜೆ ಐದು ಗಂಟೆಯ ತನಕ ನಡೆಯಲಿದೆ.

ಒಟ್ಟು 2 ಕೋಟಿ 80ಲಕ್ಷ 64ಸಾವಿರದ 864 ಮತದಾರರಿದ್ದು ಪುರುಷ ಮತದಾರರು ಹೆಚ್ಚಾಗಿದ್ದಾರೆ. ಮತದಾನಕ್ಕಾಗಿ 44,415 ಸಾಮಾನ್ಯ ಕೇಂದ್ರ, 7557 ಮೀಸಲು ಘಟಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. 32,016 ನಿಯಂತ್ರಕ ಘಟಕ, 4432 ಮೀಸಲು ನಿಯಂತ್ರಕ ಘಟಕಗಳನ್ನು ತೆರೆಯಲಾಗಿದೆ. ಒಟ್ಟು37,277 ವಿವಿಪ್ಯಾಟ್‍ಗಳನ್ನು ಅಳವಡಿಸಲಾಗಿದೆ.

ಒಟ್ಟಿನಲ್ಲಿ ತೆಲಂಗಾಣದ ಭವಿಷ್ಯವನ್ನು ಎರಡು ಕೋಟಿ 80 ಲಕ್ಷಕ್ಕೂ ಮಿಕ್ಕಿ ಮತದಾರರು ನಿರ್ಧಲಿಸಲಿದ್ದು, ಯಾವ ಪಕ್ಷಕ್ಕೆ ಶಾಪ. ಯಾವ ಪಕ್ಷಕ್ಕೆ ವರವಾಗುತ್ತೆ ಎಂಬುವುದನ್ನು ಕಾದು ನೋಡಬೇಕಾಗಿದೆ.