Sunday, November 24, 2024
ಸುದ್ದಿ

ಕನಸು ಕಾಡತೊಡಗಿದಾಗ ಗುರಿ ಸಾಧನೆ ಸಾಧ್ಯವಾಗುತ್ತದೆ: ರಶ್ಮಿ – ಕಹಳೆ ನ್ಯೂಸ್

ಪುತ್ತೂರು: ಈ ಸ್ಪರ್ಧಾತ್ಮಕ ಯುಗದಲ್ಲಿ ನಿರುದ್ಯೋಗಿಗಳಿಗೆ ಯಾವುದೇ ಬೆಲೆಯಿಲ್ಲ. ಜೀವನಕ್ಕೊಂದು ಗುರಿಯಿರಬೇಕು. ಅದು ಕನಸಾಗಿ ಸದಾ ನಮ್ಮನ್ನು ಕಾಡುತ್ತಿದ್ದಾಗ ನಾವು ಆ ಗುರಿ ಸಾಧನೆಗಾಗಿ ಶ್ರಮಿಸುತ್ತೇವೆ. ಸಕಾರಾತ್ಮ ಭಾವನೆಗಳನ್ನು ನಾವು ಬೆಳೆಸಿಕೊಂಡಾಗ ಮಾತ್ರ ನಮ್ಮ ಗುರಿಯ ಹಾದಿ ಸುಗಮವೆನಿಸಕೊಳ್ಳುತ್ತದೆ.

ಕಠಿಣ ಪರಿಶ್ರಮವಿಲ್ಲದೆ ಯಾವುದೇ ಸಾಧನೆ ಅಸಾಧ್ಯ ಎಂದು ಪುತ್ತೂರಿನ ಹೋಟೆಲ್ ಉದ್ಯಮಿ ರಶ್ಮಿ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ ‘ಜನ-ಮನ’ ಕಾರ್ಯಕ್ರಮಕ್ಕೆ ಮುಖ್ಯ ಅಭ್ಯಾಗತರಾಗಿ ಆಗಮಿಸಿ ಶುಕ್ರವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಡುವ ಉದ್ಯೋಗದ ಮೇಲೆ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸುವುದು ತಪ್ಪಾಗುತ್ತದೆ. ಪ್ರತಿಯೊಬ್ಬರೂ ಒಂದಿಲ್ಲೊಂದು ಕ್ಷೇತ್ರದಲ್ಲಿ ತಜ್ಞರಾಗಿರುತ್ತಾರೆ. ಕೆಲವರ ಪ್ರತಿಭೆ ಒಂದಿಲ್ಲೊಂದು ಸಂದರ್ಭದಲ್ಲಿ ವ್ಯಕ್ತಗೊಳ್ಳುತ್ತದೆ. ಇನ್ನು ಕೆಲವರು ಎಲೆಮರೆಯ ಕಾಯಿಯಂತೆ ಉಳಿದುಬಿಡುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಾವುದೇ ಸಾಧನೆಗೂ ಮುನ್ನ ನಿಯೋಜಿತ ಸಿದ್ಧತೆಗಳು ಮುಖ್ಯವೆನಿಸಿಕೊಳ್ಳುತ್ತದೆ. ಶಿಸ್ತುಬದ್ಧ ಜೀವನ, ಹಿಡಿದ ಕಾರ್ಯವನ್ನು ಮಾಡಿಯೇ ಸಿದ್ಧ ಎನ್ನುವ ಇಚ್ಛಾಶಕ್ತಿ, ನಿರಂತರ ಪರಿಶ್ರಮ ಎಲ್ಲವೂ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕರಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಪತ್ರಿಕೋದ್ಯಮದಲ್ಲಿ ಈ ಜಗತ್ತಿನ ಎಲ್ಲಾ ವಿಷಯಗಳೂ ಮೌಲ್ಯವನ್ನು ಕಂಡುಕೊಳ್ಳುತ್ತವೆ. ಅದರಲ್ಲಿ ಆಹಾರವೂ ಬರವಣಿಗೆಯ ವಿಷಯ.

ಹೋಟೆಲ್ ಉದ್ಯಮವನ್ನು ಆರಂಭಿಸುವುದು ಒಂದು ಸವಾಲು. ಇದು ಕರಾವಳಿ ಜನರ ಪ್ರಮುಖ ವೃತ್ತಿಗಳಲ್ಲೊಂದು. ಅದಕ್ಕಾಗಿಯೇ ದಕ್ಷಿಣ ಕನ್ನಡದ ಜನರು ಸಾಹಸೀ ಪ್ರವೃತ್ತಿಯುಳ್ಳವರು ಎಂದು ಗುರುತಿಸಲ್ಪಟ್ಟಿದ್ದಾರೆ. ಪತ್ರಕರ್ತರಾಗ ಬಯಸುವವರು ಈ ಹೋಟೆಲ್ ಉದ್ಯಮಿಗಳ ಸಾಹಸ ಪ್ರವೃತ್ತಿ, ಮನೋಸ್ಥೈರ್ಯ ಮಾದರಿಯಾಗಬೇಕು ಎಂದರು.

ಈ ಸಂದರ್ಭ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಸಂಯೋಜಕ ರಾಕೇಶ್ ಕುಮಾರ್ ಕಮ್ಮಜೆ, ಉಪನ್ಯಾಸಕಿ ಸುಶ್ಮಿತಾ ಜಯಾನಂದ್, ರಾಧಿಕಾ ಕಾನತ್ತಡ್ಕ, ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ಸಂಯೋಜಕಿ ವಿದ್ಯಾ ಸರಸ್ವತಿ, ಉಪನ್ಯಾಸಕಿ ಡಾ. ಮಾನಸ ಎಂ., ಉಪನ್ಯಾಸಕ ನಿತೀಶ್ ಕುಮಾರ್, ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕಿ ಪ್ರಜ್ಞಾ ಬಾರ್ಯ ಸ್ವಾಗತಿಸಿ ಪ್ರಸ್ತಾವನೆಗೈದರು. ವಿದ್ಯಾರ್ಥಿನಿ ಸೀಮಾ ಪೋನಡ್ಕ ವಂದಿಸಿ ಸಾಯಿನಂದಾ ಚಿಟ್ಪಾಡಿ ಕಾರ್ಯಕ್ರಮ ನಿರೂಪಿಸಿದರು.