Friday, September 20, 2024
ಸುದ್ದಿ

ಎಳನೀರು ಬೆಳ್ತಂಗಡಿ ತಾಲೂಕಿನ ಕಾಶ್ಮೀರವಿದ್ದಂತೆ, ಇಲ್ಲಿನ ಅಭಿವೃದ್ಧಿಗೆ ಪ್ರಥಮ ಆಧ್ಯತೆ ನೀಡುತ್ತೇನೆ: ಹರೀಶ್ ಪೂಂಜ – ಕಹಳೆ ನ್ಯೂಸ್

ಬೆಳ್ತಂಗಡಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಳ್ತಂಗಡಿ ಮತ್ತು ಬಾಲವಿಕಾಸ ಅಂಗನವಾಡಿ ಕೇಂದ್ರ, ಉಕ್ಕುಡ ಎಳನೀರು ಇದರ ಸಹಯೋಗದೊಂದಿಗೆ ನೂತನವಾಗಿ ನಿರ್ಮಾಣಗೊಂಡ ಮಲವಂತಿಗೆ ಗ್ರಾಮದ ಉಕ್ಕುಡ ಅಂಗನವಾಡಿ ಕೇಂದ್ರದ ಕಟ್ಟಡವನ್ನು ಮಾನ್ಯ ಶಾಸಕರಾದ ಶ್ರೀ ಹರೀಶ್ ಪೂಂಜರವರು ಉದ್ಘಾಟಿಸಿದರು.

ಸಭಾ ಕಾರ್ಯಕ್ರಮದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಎಳನೀರು ಬೆಳ್ತಂಗಡಿ ತಾಲೂಕಿನ ಕಾಶ್ಮೀರವಿದ್ದಂತೆ , ಈ ಭಾಗದ ಅಭಿವೃದ್ಧಿಗೆ ನಾನು ಪ್ರಥಮ ಆಧ್ಯತೆ ನೀಡುತ್ತೇನೆ.ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪೋಡಿ ಮುಕ್ತ ಗ್ರಾಮ ವನ್ನಾಗಿ ಮಾಡಲಾಗುವು ಎಂದು ತಿಳಿಸಿದರು. ಎಲ್ಲಾ ಅಧಿಕಾರಿಗಳು ಈ ಭಾಗದ ನಾಗರಿಕರಿಗೆ ಸೂಕ್ತ ರೀತಿಯಲ್ಲಿ ಸ್ಪಂದನೆಯನ್ನು ನೀಡಬೇಕು. ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಿದ್ಯುತ್ ಯೋಜನೆ ಕಲ್ಪಿಸುವ ನಿಟ್ಟಿನಲ್ಲಿ ನಾನು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದು ಎಳನೀರು ಸೇರಿದಂತೆ ಸುಲ್ಕೇರಿ ಮೊಗ್ರು ಗ್ರಾಮದ ಮಾಳಿಗೆ ಬೈಲು, ಶಿರ್ಲಾಲು ಗ್ರಾಮದ ಹೇಂಡೇಲು , ನಾವುರ ಗ್ರಾಮದ ಪುಳಿತ್ತಡಿ, ಈ ಎಲ್ಲಾ ಭಾಗಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದರು.

ಎಳನೀರು ಕ್ಷೇತ್ರದ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ಕುಮಾರ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡುತ್ತ ಊರಿನ ಕಚ್ಚಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ವಿಶೇಷ ಅನುದಾನ ನೀಡಬೇಕು. ನಾವು ಕತ್ತಲೆಯಲ್ಲಿ ಬದುಕು ಸಾಗಿಸುತ್ತಿದ್ದೇವೆ ಶಾಸಕರು ಬೆಳಕು ತೋರಿಸುತ್ತಾರೆ ಎಂಬ ವಿಶ್ವಾಸವಿದೆ.

ಎಳನೀರಿನ ಇತಿಹಾಸದಲ್ಲಿ ಮೊದಲಬಾರಿಗೆ ಶಾಸಕರೊಬ್ಬರು ಗೆದ್ದ 6 ತಿಂಗಳೊಳಗೆ ಇಂತಹ ಕುಗ್ರಾಮಕ್ಕೆ ಭೇಟಿ ನೀಡಿ ಅನುದಾನ ಒದಗಿಸಿ ಗುದ್ದಲಿ ಪೂಜೆ ಮಾಡಿರುವುದು ಶ್ಲಾಘನೀಯ ಎಂದರು. ತಾಲೂಕು ಪಂಚಾಯತ್ ನ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರು , ಹಾಲಿ ಸದಸ್ಯರು ಆಗಿರುವ ಸುದೀರ್ ಸುವರ್ಣ ಮಾತನಾಡಿ ಈ ಭಾಗದ ಜನರ ಸಂಕಷ್ಟವನ್ನು ನೋಡಿದಾಗ ಮನಸ್ಸಿಗೆ ನೋವಾಗುತ್ತದೆ.

ಜನಪ್ರತಿನಿಧಿಗಳಾದ ನಾವೆಲ್ಲರೂ ಇವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು. ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಸುಮಾದರ್ ರವರು ಮಾತನಾಡಿ ಈ ಭಾಗದ ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ವಾರದಲ್ಲಿ ಒಂದು ದಿನ ಎಳನೀರಿನಲ್ಲಿ ಇರಲಿದ್ದಾರೆ, ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ಶಿಸು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಪ್ರಿಯಾ ಆಗ್ನೇಸ್ ಚಾಕೋ ಶುಭ ಹಾರೈಸಿ ಇಲಾಖೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು . ಬೆಳ್ತಂಗಡಿ ಪಟ್ಟಣ ಪಂಚಾಯತ್ ಸದಸ್ಯರಾದ ಶರತ್ ಕುಮಾರ್ ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಲವಂತಿಗೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಭಾಸ್ಕರ್ ಪೂಜಾರಿ ಯವರು ಪಂಚಾಯತ್ ನಿಂದಾಗುವ ಎಲ್ಲಾ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಲವಂತಿಗೆ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಲೀಲಾವತಿ , ಸದಸ್ಯರಾದ ಕೇಶವ ದಿಡುಪೆ , ಶ್ರೀಮತಿ ಚಂದ್ರಾವತಿ , ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಚೆನ್ನಪ್ಪ ನಾಯ್ಕ, ಪ್ರಕಾಶ್ ಶೆಟ್ಟಿ , ಪಂಚಾಯತ್ ನ ಮಾಜಿ ಅಧ್ಯಕ್ಷರಾದ ದಿನೇಶ್ ಗೌಡ, ಉಪಸ್ಥಿತರಿದ್ದರು, ರತ್ನಾಕರ್ ಸ್ವಾಗತಿಸಿ ನಿರೂಪಿಸಿದರು ವಲಯ ಮೇಲ್ವಿಚಾರಕಿ ಅನ್ನಪೂರ್ಣ ವಂದಿಸಿದರು. ಅಂಗನವಾಡಿ ಶಿಕ್ಷಕಿಯರಾದ ನಾಗರತ್ನ, ಅಶ್ವಿನಿ ಸಹಕರಿಸಿದರು.