Friday, September 20, 2024
ಸುದ್ದಿ

ಸಾಮಾಜಿಕ ಜಾಲ ತಾಣದಲ್ಲಿ ಉಭಯ ಮತೀಯರ ವ್ಯಕ್ತಿ ಮತ್ತು ಜಾತಿ ನಿಂದನೆ, ಬೆದರಿಕೆ: ಕೆ.ಅಶ್ರಫ್ಫ್ ಖಂಡನೆ – ಕಹಳೆ ನ್ಯೂಸ್

ಮಂಗಳೂರು: ಇತ್ತೀಚಿಗೇ ಮಾಜಿ ಸಂಸದರಾದ ಶ್ರೀ.ಬಿ.ಜನಾರ್ದನ ಪೂಜಾರಿಯವರು ನೀಡಿದ ಭಾವನಾತ್ಮಕ ಹೇಳಿಕೇಯಿಂದಾಗಿ ಉದ್ಭವವಾಗಿರುವ ಗೊಂದಲದಿಂದಾಗಿ ಒಂದು ನಿರ್ಧಿಷ್ಟ ಸಮುದಾಯದ ಕಾಂಗ್ರೇಸ್ ಕಾರ್ಯಕರ್ತರೇನ್ನಲಾದ ವ್ಯಕ್ತಿಯೋರ್ವರು ಕನ್ನಡ ಭಾಷೇಯಲ್ಲಿ ಬಿ.ಜನಾರ್ಧನ ಪೂಜಾರಿಯವರನ್ನು ತೀವ್ರವಾಗಿ ಬೇದರಿಸಿ, ಯನ್ಕೌoಟರ್ ಮಾಡಬೇಕೇಂದು, ನಿಂದನಾತ್ಮಕವಾಗಿ ಸಾಮಾಜಿಕ ಜಾಲತಾಣದಲ್ಲಿ ಬೈದ ದ್ವನಿ ಸಂದೇಶವು ಹರಿದಾಡುತ್ತಿದೆ.

ಆ ನಂತರ ಇನ್ನೋರ್ವ ವ್ಯಕ್ತಿಯು ತಾನು ಓರ್ವ ಕಾಂಗ್ರೇಸ್ಸ್ ಕಾರ್ಯಕರ್ತನೇಂದು ಹೇಳಿಕೊಂಡು ತುಳು ಭಾಷೇಯಲ್ಲಿ ಮಾಜಿ ಸಚಿವರಾದ ಶ್ರೀ. ಬಿ.ರಮಾನಾಥ ರೈ ರವರನ್ನೂ ಕೊಡ ಬೇದರಿಸಿ, ಗುಂಡಿಕ್ಕಬೇಕೇಂಬ ಅತಿ ನಿಂದನಾತ್ಮಕವಾಗಿ ಬೈದ 1 ನಿಮಿಷ 29 ಸೆಕೆಂಡು ಸಮಯದ ದ್ವನಿ ಸಂದೇಶದ ಸುರುಳಿಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇಂತಹ ಬೇಳವಣಿಗೆಗಳನ್ನು ತೀವ್ರವಾಗಿ ಖಂಡಿಸುತ್ತೇವೆ. ಎಂದು ದ.ಕ.ಮುಸ್ಲಿಂ ಒಕ್ಕೂಟದ ಅಧ್ಯಕ್ಷರು ಮಾಜಿ ಮೇಯರ್ ಕೆ.ಅಶ್ರಫ್ಫ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಇಂತಹ ಕೃತ್ಯಗಳಿಂದಾಗಿ ಸಾಮಾಜಿಕ ಸ್ವಸ್ಥತೇಯು ಹಾನಿಯಾಗುತ್ತಿದ್ದು , ಇಂತವರ ವಿರುದ್ದ ಪೋಲೀಸರು ಕಾನೂನು ಕ್ರಮ ಜರುಗಿಸಬೇಕೇಂದು, ನಿಯೋಗವೊಂದು, ಪೋಲೀಸು ಆಯುಕ್ತರನ್ನು ಬೇಟಿ ಮಾಡಿ ದೂರು ನೀಡಿ ಒತ್ತಾಯಿಸಲಿದ್ದೇವೆ.