Recent Posts

Monday, January 20, 2025
ಸುದ್ದಿ

10 ವರ್ಷಗಳಿಂದ ತಲೆ ಮರೆಸಿಕೊಂಡು ವಿದೇಶದಲ್ಲಿದ್ದ ಹಳೆ ಆರೋಪಿಯ ಬಂಧನ – ಕಹಳೆ ನ್ಯೂಸ್

ಮಂಗಳೂರು: 2008 ರಲ್ಲಿ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವಂಚನೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ 10 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಹಳೆ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸುವಲ್ಲಿ ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳ ತಂಡದ ಅಧಿಕಾರಿ/ಸಿಬ್ಬಂದಿಯವರು ಯಶಸ್ವೀಯಾಗಿರುತ್ತಾರೆ.

ದಸ್ತಗಿರಿಯಾದ ಆರೋಪಿಯ ವಿವರ:
ಮೊಹಮ್ಮದ್ ರಫೀಕ್ ಬ್ಯಾರಿ. ಪ್ರಾಯ 38 ತಂದೆ:ಎಮ್.ಎಮ್ ಅಬ್ದುಲ್ ವಾಸ: ಭಾಸ್ಕರ್ ನಗರ, ಉಚ್ಛಿಲ, ಉಡುಪಿ ಜಿಲ್ಲೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ನಗರದ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಮಂಜುನಾಥ ಶೆಟ್ಟಿ. ಇವರ ನೇತ್ರತ್ವದಲ್ಲಿ ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಪೊಲೀಸ್ ನಿರೀಕ್ಷಕರು ಶ್ರೀ ರಫಿಕ್ ಕೆ.ಎಮ್ ಮತ್ತು ತಂಡ, ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಉಮೇಶ್ ಕುಮಾರ್ ಎಮ್.ಎನ್ ಹಾಗೂ ಸಿಬ್ಬಂಧಿಗಳ ಪರಿಶ್ರಮದಿಂದ ನಡೆದಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು