Recent Posts

Sunday, January 19, 2025
ಸುದ್ದಿ

ಸ್ವಚ್ಚತೆ ವಿಚಾರದಲ್ಲಿ ಮಂಗಳೂರಿನಾದ್ಯಂತ ಕ್ರಾಂತಿ ಮೂಡಿಸಿರುವ ರಾಮಕೃಷ್ಣ ಸಂಸ್ಥೆ – ಕಹಳೆ ನ್ಯೂಸ್

ಮಂಗಳೂರು: ಸ್ಮಾರ್ಟ್ ಸಿಟಿ ಎಂದಾಗಲೆ ನೆನಪಾಗುವುದು ಮೊದಲು ಕಡಲ ನಗರಿ ಮಂಗಳೂರು. ಅನೇಕ ಪ್ರವಾಸಿಗರ ಆಕರ್ಷಣಿಯ ತಾಣ. ಇಲ್ಲಿಗೆ ದೇಶ ವಿದೇಶಗಳಿಂದ ಪ್ರವಾಸಿಗರು ಕಡಲ ನಗರಿಯ ಪ್ರಕೃತಿಯ ಸೌಂಧರ್ಯವನ್ನು ಸವಿಯಲು ಪಯಣ ಬೆಳೆಸುತ್ತಿದ್ದಾರೆ. ಆದರೆ ಇಲ್ಲಿನ ಅವ್ಯವಸ್ಥೆಯ ಗೋಳು ಕೇಳಲು ಸ್ವತಃ ಪ್ರತಿನಿಧಿಗಳೆ ಮುಂದಾಗದಿರುವುದು ಶೋಚನೀಯ. ಅಂತದ್ರದಲ್ಲಿ ರಾಮಕೃಷ್ಣ ಸಂಸ್ಥೆ ಇಲ್ಲಿನ ಸ್ವಚ್ಚಂಧದ ಬಗ್ಗೆ ಕಾಳಜಿ ವಹಿಸಿದ್ದು ಗಮನರ್ಹ.

ಸ್ವಚ್ಚತೆ ವಿಚಾರದಲ್ಲಿ ಮಂಗಳೂರಿನಾದ್ಯಂತ ಕ್ರಾಂತಿ ಮೂಡಿಸಿರುವ ರಾಮಕೃಷ್ಣ ಮಠದ ಸಾರಥ್ಯದಲ್ಲಿ ಕೊಟ್ಟಾರ ಚೌಕಿ ಪ್ಲೈ ಓವರ್ ಪ್ರವಾಸಿಗರ ಆಕರ್ಷಣಿಯ ಸ್ಥಳವಾಗಿ ಬದಲಾಗಲಿದೆಯಂತೆ. ಅನೇಕ ದಾನಿಗಳ ನೆರವಿನಿಂದ ಈ ತಾಣವನ್ನು ಸುಂದರ ತಾಣವನ್ನಾಗಿಸಿ ಸುಂದರ ರೂಪಗೊಳಿಸಲಿದ್ದು ಸದ್ಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ಪಡೆದು ಮುಂದಿನ ದಿನಗಳಲ್ಲಿ ಇದರ ಕಾರ್ಯ ಮುಂದುವರೆಯಲಿದೆಯಂತೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯ ಇಲ್ಲಿನ ಪ್ಲೈಓವರ್‌ನ ತಳಭಾಗದ ಸ್ಥಳದಲ್ಲಿ ತಳ್ಳುವ ಗಾಡಿಗಳು ಹಾಗೂ ಇನ್ನಿತರ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತಿದೆ. ಸ್ವಚ್ಚತೆ ಕಾಪಾಡುವಲ್ಲಿ ಇಲ್ಲಿನ ಜನರು ನಿರುತ್ಸಾಹ ತೋರಿದ್ದು ಪ್ಲೈಓವರ್‌ನ ಅಸುಪಾಸಿನ ಜಾಗ ತೀರ ಹದಗೆಟ್ಟಿದೆ. ಇಲ್ಲೆ ಪಕ್ಕದಲ್ಲಿ ಕೊಳಚೆ ನೀರು ಹಾದು ಹೋಗುತ್ತಿದ್ದು ಅದರ ವಾಸನೆಯಿಂದ ಜನರು ಮೂಗು ಮುಚ್ಚಿಕೊಂಡು ಹೊಗುವ ಪರಿಸ್ಥಿತಿ ಉಂಟಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಮಕೃಷ್ಣ ಮಠದ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಪ್ಲೈಓವರ್‌ನ ತಳಭಾಗದ ಸುಮಾರು 500-600ಮೀಟರ್ ವ್ಯಾಪ್ತಿಯಲ್ಲಿ ಇಂಟರ್‌ಲಾಕ್ ಅಳವಡಿಸಲಾಗುತ್ತಿದ್ದು ನಿಗದಿತ ಜಾಗದಲ್ಲಿ ಹೂವಿನ ಗಿಡಗಳೊಂದಿಗೆ ಅಲಂಕಾರ ಹಾಗೂ ಗಾರ್ಡನ್ ರೂಪದಲ್ಲಿ ಸುಂದರೀಕರಣಕ್ಕೆ ಒತ್ತು ನೀಡಲಾಗುತ್ತಿದೆ.

ಇಲ್ಲಿಗೆ ಬರುವ ಸಮಯದಲ್ಲಿ ಜನರು ಕಾಲ ಕಳೆಯಲು ಅನುಕೂಲವಾಗುವಂತೆ ಮನ ಸೆಳೆಯುವ ಶೈಲಿಯ ಬೆಂಚುಗಳನ್ನು ಇಡಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಸ್ಥಳದಲ್ಲಿ ಎಲ್ಲೆಂದರಲ್ಲಿ ಕಾರು, ರಿಕ್ಷಾ, ಬೈಕ್ ಪಾರ್ಕ್ಗೆ ಅವಕಾಶವಿರುವುದಿಲ್ಲ.

ಈ ಪ್ರಸ್ತಾವನೆ ಮುಂದಿನ ಜನವರಿಯಿಂದ ಪ್ರಾರಂಭಮಾಡಲಿದೆ. ಆ ಮೂಲಕ ಸ್ಮಾರ್ಟ್ ಸಿಟಿ ಪರಿಕಲ್ಪನೆಯು ಸಹಕಾರಗೊಂಡರೆ ಕಡಲ ನಗರಿ ಮಂಗಳೂರು ಸ್ಮಾರ್ಟ್ ಆಗುವುದರಲ್ಲಿ ಸಂದೇಹವೇ ಇಲ್ಲ.
ರಾಜೇಂದ್ರ ಶೆಣೈ ನ್ಯೂಸ್ ಡೆಸ್ಕ್ ಕಹಳೆ ನ್ಯೂಸ್,