ಮಂಗಳೂರು: ರಾಮ ಮಂದಿರದ ಪರ ಹೇಳಿಕೆ ನೀಡಿದ ಜನಾರ್ಧನ ಪೂಜಾರಿ ಯಂತಹ ವ್ಯಕ್ತಿಯನ್ನು ದೇಶದಲ್ಲಿ ಬದುಕಲು ಬಿಡಬಾರದು. ಎನ್ ಕೌಂಟರ್ ನಲ್ಲಿ ಸಾಯಿಸಬೇಕು. ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಅವಹೇಳನಗೈದಿದ್ದ ಆರೋಪಿಯನ್ನು ಮಂಗಳೂರು ನಗರದ ಪೊಲೀಸರು ದುಬೈಯಲ್ಲಿ ಪತ್ತೆ ಹಚ್ಚಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಜನಾರ್ದನ ಪೂಜಾರಿ ಅವರನ್ನು ಅವಹೇಳನಗೈದಿದ್ದ ಆರೋಪಿಯನ್ನು ಹಕೀಂ ಪುತ್ತೂರು ಎಂದು ಗುರುತಿಸಲಾಗಿದೆ.