ಇಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಮತ್ತಿತ್ತರು ಭಾಗಿ – ಕಹಳೆ ನ್ಯೂಸ್
ಕಲ್ಲಡ್ಕ: ಶ್ರೀರಾಮ ವಿದ್ಯಾಕೆಂದ್ರದಲ್ಲಿ ಇಂದು ಸಂಜೆ ೫ ಗಂಟೆಗೆ ಹೊನಲು ಬೆಳಕಿನ ಕ್ರೀಡೋತ್ಸವ ನಡೆಯಲಿದ್ದು ಕ್ಷಣ ಗಣನೆ ಆರಂಭವಾಗಿದೆ.
ಒಂದೇ ವೇದಿಕೆಯಲ್ಲಿ ತಮ್ಮ ಶಕ್ತಿ ಪ್ರದರ್ಶನವನ್ನು ತೋರಿಸುವ ಮಹಾನ್ ಹೊನಲು ಬೆಳಕಿನ ಕ್ರೀಡೋತ್ಸವ ಇದಾಗಿದೆ. ಕ್ರೀಡೋತ್ಸವ ಎಂದಾಕ್ಷಣ ಇದು ಯಾವುದೇ ಪಂದ್ಯಾವಳಿ ಅಲ್ಲ. ಬದಲಾಗಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಮತ್ತು ಸಾಹಸದ ಅನಾವರಣ. ಕತ್ತಲೆಯ ಕ್ರೀಡಾಂಗಣದಲ್ಲಿ ದೀಪಗಳನ್ನು ಹಚ್ಚಿ ಕತ್ತಲಿನಲ್ಲಿರುವ ವಿದ್ಯಾರ್ಥಿಗಳ ಪ್ರತಿಭೆ ಬೆಳಕಿನತ್ತ ತರುವ ಕಾರ್ಯ ಇದಾಗಿದೆ. ಕ್ರೀಡೋತ್ಸವದಲ್ಲಿ ೩೫೦೦ಕ್ಕೂ ಹೆಚ್ಚಿನ ಮಕ್ಕಳು ಭಾಗವಹಿಸುತ್ತಾರೆ. ವಿದ್ಯಾರ್ಥಿಗಳನ್ನು ಕ್ರೀಡೋತ್ಸವದ ಒಂದು ತಿಂಗಳ ಮೊದಲೇ ಆಯ್ಕೆ ಮಾಡಿ ಅಣಿಗೊಳಿಸಲಾಗಿದೆ. ನಿಯುದ್ಧ, ಘೋಷ್ ಪ್ರದರ್ಶನ, ದೀಪಾರತಿ, ಯೋಗಾಸನ, ಮಲ್ಲ ಕಂಬ ಹೀಗೆ ಇನ್ನಿತರ ಪ್ರದರ್ಶನಕ್ಕೆ ಶ್ರೀರಾಮ ವಿದ್ಯಾಕೇಂದ್ರ ಸಾಕ್ಷಿಯಾಗಲಿದೆ.
ಇನ್ನು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ವಹಿಸಲಿದ್ದಾರೆ. ಅಲ್ಲದೆ ಪ್ರಮುಖ ಅಭ್ಯಾಗತರಾಗಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ, ಬೆಂಗಳೂರಿನ ನ್ಯೂ ಹ್ವಾರಿಝೋನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ್ ಮಂಗ್ನಾನಿ, ಭಾರತೀಯ ಏರ್ ಮಾರ್ಷಲ್ ಸತೀಶ್ ಪಾಲ್ ಸಿಂಗ್, ಮತ್ತಿತ್ತರರು ಭಾಗವಹಿಸಲಿದ್ದಾರೆ. ಇನ್ನು ಈ ವೈಭವದ ಕ್ರೀಡೋತ್ಸವವು ಕಹಳೆ ನ್ಯೂಸ್‌ನಲ್ಲಿ ಲೈವ್‌ನಲ್ಲಿ ವೀಕ್ಷಿಸಬಹುದಾಗಿದೆ.