ಮಂಗಳೂರು: ಕೊಡಗು ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ವಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಖಾದರ್ ನ್ಯಾಶನಲ್ ಡಿಸಾಸ್ಟರ್ ಫಂಡ್‌ನಿಂದ ರಾಜ್ಯಕ್ಕೆ ಸಿಕ್ಕಿರೋದು ಕೇವಲ 546 ಕೋಟಿ ಬಿಡುಗಡೆ ಮಾಡಿದೆ. ಆದ್ರೆ 8 ಜಿಲ್ಲೆಗಳಿಗೆ ಹಂಚಿದಾಗ ಕೊಡಗಿಗೆ ಲಭ್ಯವಾಗೋದು 60 ಕೋಟಿ ಮಾತ್ರ ಇದರಿಂದ ಸಂಪಾಜೆ ರಸ್ತೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಿರಾಶ್ರಿತರಿಗೆ ರಾಜ್ಯ ಸರಕಾರ ಮನೆ ನಿರ್ಮಿಸಿ ಕೊಡುತ್ತಿದೆ ಅದಕ್ಕೆ ಕೂಡ ಕೇಂದ್ರ ಸರ್ಕಾರ ನಯಪೈಸೆ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.