Friday, September 20, 2024
ಸುದ್ದಿ

ರಾಜ್ಯಮಟ್ಟದ ಶಾರ್ಟ್ ಕೋರ್ಸ್ ಈಜು ಸ್ಪರ್ಧೆ: ಚಾಂಪಿಯನ್ ಶಿಪ್ ಯಾರಿಗೆ? – ಕಹಳೆ ನ್ಯೂಸ್

ಪುತ್ತೂರು: ಕರ್ನಾಟಕ ಈಜು ಅಸೋಸಿಯೇಷನ್ ಆಶ್ರಯದಲ್ಲಿ ಪುತ್ತೂರು ಅಕ್ವೆಟಿಕ್ ಕ್ಲಬ್ ಸಹಯೋಗದಲ್ಲಿ ಪರ್ಲಡ್ಕ ಡಾ ಶಿವರಾಮ ಕಾರಂತ ಬಲವನದ ಈಜುಕೊಳದಲ್ಲಿ ಡಿ 6 ದಿಂದ 9ರವರೆಗೆ ನಡೆದ ರಾಜ್ಯಮಟ್ಟದ ಶಾರ್ಟ್ ಕೋರ್ಸ್ ಈಜು ಸ್ಪರ್ಧೆಯಲ್ಲಿ ಸಬ್ ಜ್ಯೂನಿಯರ್ ವಿಭಾಗದಲ್ಲಿ ಡಾಲ್ಫಿನ್ ಅಕ್ವೆಟಿಕ್ ಕ್ಲಬ್ ಬೆಂಗಳೂರು ಮತ್ತು ಜೂನಿಯರ್ ವಿಭಾಗದಲ್ಲಿ ಬಸವನಗುಡಿ ಅಕ್ವೆಟಿಕ್ ಕ್ಲಬ್ ವಿನ್ನರ್ ಆಗಿ ಚಾಂಪಿಯನ್ ಶಿಪ್ ಪಡೆದುಕೊಂಡಿದೆ.

ವಿಜೇತರಿಗೆ ಟ್ರೋಪಿ ನೀಡಲಾಯಿತು. ಈಜು ಅಸೋಸಿಯೇಷನ್ ಕಾರ್ಯದರ್ಶಿ ಸತೀಶ್ ಕುಮಾರ್. ಭವಾನಿ ಶೇಟ್, ಡಾ. ಹರಿಕೃಷ್ಣ ಪಾಣಾಜೆ ಮತ್ತಿತರರು ವಿಜೇತರಿಗೆ ಬಹುಮಾನ ವಿತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೋನೆಯ ದಿನವಾದ ನಿನ್ನೆ ಒಟ್ಟು 2 ಕೂಟ ದಾಖಲೆ ನಿರ್ಮಿಸಿದ್ದು, ಹುಡುಗರ 50 ಮೀಟರ್ ಬ್ರೇಸ್ಟ್ಸ್ಟ್ರೋಕ್‌ನಲ್ಲಿ ಡಾಲ್ಫಿನ್ ಅಕ್ವೆಟಿಕ್ ಕ್ಲಬ್‌ನ ವಿಧಿತ್ ಎಸ್. ಶಂಕರ್ 34.23 ಸೆಕೆಂಡ್‌ನಲ್ಲಿ ಗುರಿ ತಲುಪಿದರು.

ಜಾಹೀರಾತು

ಹುಡುಗಿಯರ ನೂರು ಮೀಟರ್ ಬಟರ್‌ಪ್ಲೈನಲ್ಲಿ ಡಾಲ್ಫಿನ್ ಅಕ್ವೆಟಿಕ್ ಕ್ಲಬ್‌ನ ನೀನಾ ವೆಂಕಟೇಶ್ 1 ನಿಮಿಷ 5.3 ಸೆಂಕೆಂಡಿನಲ್ಲಿ ಗುರಿ ತಲುಪಿ ಕೂಟ ದಾಖಲೆ ನಿರ್ಮಿಸಿದರು.

ನಾಲ್ಕು ದಿನಗಳಲ್ಲಿ ಒಟ್ಟು 800ಕ್ಕೂ ಮಿಕ್ಕಿ ಈಜು ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. 20 ತೀರ್ಪುಗಾರರು ಉತ್ತಮ ತೀರ್ಪುಗಾರಿಕೆ ನೀಡಿದ್ದು, ಎಲೆಕ್ಟ್ರೋನಿಕ್ಸ್ ತೀರ್ಪುಗಾರಿಕೆ ವ್ಯವಸ್ಥೆ ಇತ್ತು.