ಬಂಟ್ವಾಳ: ಗ್ರಾ.ಪಂ.ಪಿಡಿಒ ಮತ್ತು ಶಾಲಾ ಮುಖ್ಯಸ್ಥ ರ ಪ್ರಗತಿ ಪರಶೀಲನಾ ವಿಶೇಷ ಸಭೆ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಅವರ ಅಧ್ಯಕ್ಷ ತೆಯಲ್ಲಿ ಬಿಸಿರೋಡಿನ ಎಸ್.ಜಿ.ಎಸ್. ವೈ ಸಭಾಂಗಣದಲ್ಲಿ ನಡೆಯಿತು.
ಬಳಿಕ ಮಾತನಾಡಿದ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಶಾಲಾ ಅಭಿವೃದ್ಧಿ ಯ ಕೆಲಸವನ್ನು ಮಾಡಲು ಸರಕಾರಿ ಅಧಿಕಾರಿಗಳು ಉದಾಸೀನ ಮನೋಭಾವ ಮಾಡಬಾರದು.
ಸರಕಾರಿ ಶಾಲೆಗಳ ಬೇಡಿಕೆಯನ್ನು ಕಾಯದೆ ಮೂಲಭೂತ ಸೌಕರ್ಯಗಳ ಅಧ್ಯತೆಯ ನೆಲೆಯಲ್ಲಿ ಗ್ರಾ.ಪಂ.ಪಿಡಿಒಗಳು ಒದಗಿಸಬೇಕು.
ಸರಕಾರಿ ಶಾಲೆಗಳು ಉಳಿಯಬೇಕು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಮಾಡಲು ಸೌಲಭ್ಯಗಳು ಪ್ರೇರಣೆ. ಜನಪ್ರತಿನಿಧಿಗಳು ತಮ್ಮ ಹೆಚ್ಚಿನ ಅನುದಾನಗಳನ್ನು ಸರಕಾರಿ ಶಾಲೆಯ ಅಭಿವೃದ್ಧಿ ಗಾಗಿ ಕಾದಿರಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ಕ್ಕೆ ನಾಂದಿಯಾಗಬೇಕು.
ಈ ಸಂದರ್ಭದಲ್ಲಿ ತಾ.ಪಂ.ಇ.ಒ.ರಾಜಣ್ಷ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಉಪಸ್ಥಿತರಿದ್ದರು.