Friday, September 20, 2024
ಸುದ್ದಿ

ಗೂಂಡಾ ರಾಜಕೀಯ ಮಾಡಿ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದೆ: ದೇವದಾಸ್ ಶೆಟ್ಟಿ – ಕಹಳೆ ನ್ಯೂಸ್

ಬಂಟ್ವಾಳ: ಗೂಂಡಾ ರಾಜಕೀಯ ಮಾಡಿ ಬಳಿಕ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ನಿನ್ನೆ ಮಾಡಿದೆ ಎಂದು ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ ಅವರು ಪಕ್ಷ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.‌

ಸ್ವಯಂ ಅಪರಾಧದಿಂದ ಇಂದಿರಾ ಕ್ಯಾಂಟೀನ್ ತಡವಾಗಿದೆ ವಿನಹಃ ಬಿಜೆಪಿಯಾಗಲಿ , ಶಾಸಕ ರಾಜೇಶ್ ನಾಯಕ್ ಅಗಲಿ ಮಾಡಿಲ್ಲ ಎಂದು ಮಾಧ್ಯಮದ ಮೂಲಕ ಸ್ಪಷ್ಟ ಪಡಿಸುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದಿರಾ ಕ್ಯಾಂಟೀನ್ ಆರಂಭದ ಲ್ಲಿ ಪುರಸಭೆಯಲ್ಲಿ ನಿರ್ಣಯವಾದ ಬಳಿಕ ಗುರುತಿಸಿದ ಜಾಗ ಈಗಲೂ ಅಲ್ಲೇ ಇದೆ, ಬದಲಾಗಿ ರಾಷ್ಟ್ರೀಯ ಹೆದ್ದಾರಿ ಯ ಜಾಗದಲ್ಲಿ ಅಕ್ರಮವಾಗಿ ಮಾಡಲಾಗಿದೆ ಎಂದು ಆರೋಪಿಸಿದರು. ‌

ಜಾಹೀರಾತು

4.90. ಸೆಂಟ್ಸ್ ಜಾಗ ಈಗಲೂ ರಾಷ್ಟ್ರೀಯ ಹೆದ್ದಾರಿ ಹೆಸರಿನಲ್ಲಿ ಇದೆ. ಕಳೆದ ಬಾರಿ ವಿಧಾನ ಸಭಾ ಚುನಾವಣಾ ನೀತಿ ಸಂಹಿತೆ ಇರುವಾಗಲೇ ಕಾಮಗಾರಿ ನಡೆಯವ ಸಂದರ್ಭದಲ್ಲಿ ಬಿಜೆಪಿ ವಿರೋಧ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ಗೋಲ್ ಮಾಲ್ ನಡೆಯುತ್ತಿದೆ , ಲಕ್ಷಾಂತರ ರೂ ದೋಚುವ ಕೆಲಸ ಇಂದಿರಾ ಕ್ಯಾಂಟೀನ್ ನ ಮೂಲಕ ಮಾಡಿದ್ದಾರೆ ಅದೇ ರೀತಿಯಲ್ಲಿ ಇಲ್ಲೂ ಕೂಡಾ ಗೋಲ್ ಮಾಲ್ ಕ್ಯಾಂಟೀನ್ ಮಾಡಲು ಕಾಂಗ್ರೆಸ್ ಕ್ಯಾಂಟೀನ್ ಉದ್ಘಾಟನೆ ಗೆ ಆಸಕ್ತಿ ವಹಿಸಿದಂತಿದೆ ಎಂದರು.

ಶಿಷ್ಟಾಚಾರ ಉಲ್ಲಂಘನೆ ಮಾಡಿ ಕಾರ್ಯಕ್ರಮ ಮಾಡುವುದಾದರೆ ಎಲ್ಲಾ ಮಾಜಿಗಳನ್ನು ಸೇರಿಸಿ ಜಿಲ್ಲೆಯ ಲ್ಲಿ ಉತ್ತಮ ಕೆಲಸ ಮಾಡುವ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ತಿಳಿಸಿದ್ದರು. ‌ಅದರೆ ಅದು ಏಕೆ ನೇಪತ್ಯಕ್ಕೆ ಸರಿಯಿತು ಅನ್ನುವುದು ಗೊತ್ತಿಲ್ಲ. ಸರಕಾರಿ ಕಾರ್ಯಕ್ರಮ ವಾದರೆ ಕಾಂಗ್ರೆಸ್ ಪಕ್ಷದ ದ್ವಜಗಳನ್ನು ಹಾಕುವ ಪ್ರಶ್ನೆ ಯಾಕಿತ್ತು.‌ಕಾಂಗ್ರೇಸ್ ನ ಅನೇಕ ಹಿರಿಯ ಪ್ರಮುಖ ನಾಯಕರುಗಳಿಗೆ ಘೋಷಣೆ ಕೂಗುಲವ ಮೂಲಕ ಇದು ಕಾಂಗ್ರೆಸ್ ಕಾರ್ಯಕ್ರಮ ವಾಗಿದೆ ಎಂಬುದು ಸ್ಪಷ್ಟವಾಗಿತ್ತು.‌

ಶಾಸಕರನ್ನು ಏರು ಧ್ವನಿಯಾಲ್ಲಿ ಮಾತನಾಡಿ ಅವರನ್ನೇ ಪ್ರಶ್ನಿಸುವ ಕಾರ್ಯ, ಜೊತೆ ಲಗಾಮಿಲ್ಲದೆ ವರ್ತನೆ ನಡೆದಿದೆ.
ಬಳಿಕ ಇದೇ ವರ್ತನೆ ಸಭಾ ಕಾರ್ಯಕ್ರಮ ದಲ್ಲಿ ನಡೆದರೆ ಎಂಬ ಕಾರಣಕ್ಕಾಗಿ ಅವರ ಮೇಲೆ ಕಾನೂನು ಕ್ರಮ ವಹಿಸಿ ಅವರೆಗೆ ಕಾರ್ಯಕ್ರಮ ಕ್ಕೆ ಭಾಗವಹಸುದಿಲ್ಲ ಎಂದು ಹೇಳಿದ್ದಾರೆ. ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆದಿದೆ.‌ಶಾಸಕರ ಸೂಚನೆಯನ್ನು ದಿಕ್ಕರಿಸಿ ಕಾರ್ಯಕ್ರಮ ಮುಂದುವರಿಸಿ ದನ್ನು ಬಂಟ್ವಾಳ ಬಿಜೆಪಿ ಖಂಡಿಸುತ್ತದೆ.‌ಅನೇಕ ಕಾರ್ಯಕ್ರಮ ಗಳು ಶಿಷ್ಟಾಚಾರ ಮೀರಿ ಕಾರ್ಯಕ್ರಮ ಗಳು ನಡೆದಿವೆ , ಇದಕ್ಕೆ ಅಧಿಕಾರಿಗಳು ಪರೋಕ್ಷವಾಗಿ ಬೆಂಬಲ ನೀಡುವ ಕೆಲಸ ಅಗುತ್ತಿದೆ.

ಮುಂದಿನ ದಿನಗಳಲ್ಲಿ ಶಿಷ್ಟಾಚಾರ ಮೀರಿ ಕಾರ್ಯಕ್ರಮಗಳು ನಡೆದರೆ ಅಗುವ ಅನಾಹುತಗಳಿಗೆ ಜಿಲ್ಲಾಧಿಕಾರಿ ನೇರ ಹೊಣೆಯಾಗುತ್ತಾರೆ. ಎಲ್ಲಾ ಘಟನೆಗಳು ಕಾಂಗ್ರೆಸ್ ಮೂಲಕ ನಡೆದಿದೆ ಎನ್ನುವುದಕ್ಕೆ ಉಸ್ತುವಾರಿ ಸಚಿವ ರ ಕ್ಷಮೆಯಾಚನೆ ಸಾಕ್ಷಿಯಾಗಿದೆ.‌ ನಿನ್ನ ಯ ಘಟನೆಗೆ ಕಾರಣರಾದ ಜಿ.ಪಂ.ಸದಸ್ಯ ರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಬಿಜೆಪಿ ಅಗ್ರಹ ಪಡಿಸುತ್ತದೆ.‌

ಜಿಲ್ಲಾ ‌ಬಿಜೆಪಿ ವಕ್ತಾರ ಹರಿಕ್ರಷ್ಣ ಬಂಟ್ವಾಳ ಮಾತನಾಡಿ ಶಾಸಕರ ವ್ಯಕ್ತಿ ತ್ವಕ್ಕೆ ಹಾನಿಯಾಗುವ ರೀತಿಯಲ್ಲಿ ಮಾಡಿದ್ದಾರೆ.‌
ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಕಾನೂನಿಗೆ ವಿರೋಧ ನಡೆವಳಿಕೆ ನಡೆದಿರುವದರ ಬಗ್ಗೆ ಸೂಕ್ತ ತನಿಖೆ ಯಾಗಬೇಕು.‌
ನಿನ್ನೆ ಯ ಘಟನೆ ಕಾಂಗ್ರೇಸ್ ಬಂಟ್ವಾಳ ಮತದಾರರಿಗೆ ಮಾಡಿದ ಅವಮಾನ.

ಜಿ.ಪಂ. ಸದಸ್ಯ ಗೂಂಡಾಗಿರಿ ಪ್ರದರ್ಶನ ದಿಂದ ರೌಡಿಶೀಟರ್ ಎಂಬುದು ಸಾಬೀತು ಪಡಿಸಿದರು. ಅಧಿಕಾರಿಗಳ‌ ಸಮಕ್ಷದಲ್ಲಿ ಈ ಘಟನೆ ನಡೆದಿದೆ, ಹಾಗಾಗಿ ಪೋಲೀಸರು ತಪ್ಪಿತಸ್ಥ ರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಬಿಜೆಪಿ ಪಕ್ಷದ ವರು ಬಂಟ್ವಾಳ ನಗರ ಠಾಣೆಗೆ ದೂರು ಅರ್ಜಿ ಸಲ್ಲಿಸಿದೆ ಎಂದರು.

ಶಾಸಕರ ಹಕ್ಕುಚ್ಯುತಿಯಾಗಿದೆ, ಮಾನಸಿಕವಾಗಿ ಯೂ ಅವತಿಗೆ ಘಾಸಿಯಾಗಿದೆ, ಹಾಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದರು.‌