ಬಂಟ್ವಾಳ: ಗ್ರಾಮ ಪಂಚಾಯತ್, ಗೋಳ್ತಮಜಲು, ಪಶುಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಬಂಟ್ವಾಳ, ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ( ನಿ.) ಮಂಗಳೂರು, ಹಾಲು ಉತ್ಪಾದಕರ ಸಹಕಾರಿ ಸಂಘ ನಿ. ಕಲ್ಲಡ್ಕ ಮತ್ತು ಪರಿಸರದ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಮತ್ತು ಮಾಹಿತಿ ಶಿಬಿರ ಅಮ್ಟೂರು ಎಂಬಲ್ಲಿ ತೆಂಗಿನ ತೋಟದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಮಾತನಾಡಿ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಉತ್ತಮ ಗುಣಮಟ್ಟದಲ್ಲಿ ಬೆಳೆಯಲು ಇಲ್ಲಿನ ರೈತರೇ ಕಾರಣ. ಇತರ ಕಡೆಗಳಿಂದ ಹಾಲು ಅಮದು ಮಾಡುವ ಜಿಲ್ಲೆಯಾಗಿದ್ದ ದ.ಕ.ಪ್ರಸ್ತುತ ಇಲ್ಲಿನ ಬೇಡಿಕೆಯನ್ನು ಪೂರೈಸಿ ಬೇರೆಬೇರೆ ಉತ್ಪನ್ನಗಳ ತಯಾರಿಕೆಯ ಮೂಲಕ ಮಾರುಕಟ್ಟೆಯಲ್ಲಿದೆ.
ಯಾವತ್ತು ಹೈನುಗಾರಿಕೆ ನಷ್ಟವಾಗುತ್ತದೆ ಎಂಬ ಭಾವನೆ ಬೇಡ, ಸರಿಯಾದ ಮಾಹಿತಿ ತಂತ್ರಜ್ಞಾನ ಬಳಸಿ ಹೈನುಗಾರಿಕೆ ಮಾಡಿದರೆ ಲಾಭ ಗಳಿಸಲು ಸಾಧ್ಯ ಎಂದರು.
ಜಾನುವಾರುಗಳನ್ನು ನಾವು ಪ್ರೀತಿ ಯಿಂದ ಸಾಕಿದರೆ ಮುಂದೆ ಜಾನುವಾರು ನಮ್ಮನ್ನು ಸಾಕುತ್ತದೆ ಹಾಗಾಗಿ ನಿರ್ಲಕ್ಷ್ಯ ಬೇಡ ಎಂದರು.
ಮುಖ್ಯ ಅತಿಥಿ ಯಾಗಿ ಅಗಮಿಸಿದ್ದ ಜಿ.ಪಂ.ಸದಸ್ಯೆ ಮೀನಾಕ್ಷಿ ಶಾಂತಿ ಗೂಡು ಮಾತನಾಡಿ ಮಹಿಳೆಯರು ಹೈನುಗಾರಿಕೆ ಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಾಗ ನಿರುದ್ಯೋಗ ಸಮಸ್ಯೆ ಹೋಗಲಾಡುತ್ತದೆ, ಆರ್ಥಿಕ ವಾಗಿ ಸಬಲರಾಗಲು ಸಾಧ್ಯವಾಗುತ್ತದೆ, ನಮ್ಮ ಕ್ರಷಿ ಸಂಸ್ಕೃತಿ ಉಳಿಯಲು ಸಾಧ್ಯ ವಾಗುತ್ತದೆ ಎಂದರು.
ಮಾಜಿ ಶಾಸಕ ಕಲ್ಲಡ್ಕ ಹಾಲು ಉತ್ಪಾದಕ ರ ಸಂಘದ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ಮಾತನಾಡಿ ಇಂತಹ ಕಾರ್ಯಕ್ರಮ ಗಳಲ್ಲಿ ರೈತರು ಹೆಚ್ಚು ತೊಡಗಿಸಕೊಂಡಾಗ , ಅಮೂಲಕ ಮಾಹಿತಿ ಪಡೆದಾಗ ಹೈನುಗಾರಿಕೆಯಲ್ಲಿ ಸಫಲತೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ವೇದಿಕೆಯಲ್ಲಿ ಗೋಳ್ತಮಜಲು ಗ್ರಾ.ಪಂ.ಅಧ್ಯಕ್ಷೆ ಜಯಲಕ್ಷ್ಮಿ , ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ಗೋಳ್ತಮಜಲು ತಾ.ಪಂ.ಸದಸ್ಯ ಮಹಾಬಲ ಆಳ್ವ, ಪಶುಸಂಗೋಪನೆ ಇಲಾಖೆಯ ಜಂಟಿನಿರ್ದೇಶಕ ಡಾ! ದೇವದಾಸ ಕಾರಂದೂರು, ಜಿಲ್ಲಾ ಹಾಲು ಒಕ್ಕೂಟದ ಉಪಾಧ್ಯಕ್ಷ ಸುಚರಿತ ಶೆಟ್ಟಿ, ಮಂಗಳೂರು ಒಕ್ಕೂಟದ ನಿರ್ದೇಶಕ ಡಾ! ಕ್ರಷ್ಣ ಭಟ್, ವ್ಯವಸ್ಥಾಪಕ ನಿರ್ದೇಶಕ ಶಾಂತರಾಮ ಶೆಟ್ಟಿ ಮತ್ತಿತರ ರು ಉಪಸ್ಥಿತರಿದ್ದರು.
ತಾಲೂಕು ಪಶುಸಂಗೋಪನೆ ಇಲಾಖೆಯ ಅಧಿಕಾರಿ ಡಾ! ಹೆನ್ರಿ ಸ್ವಾಗತಿಸಿ, ರಾಜೇಶ್ ಕೊಟ್ಟಾರಿ ವಂದಿಸಿದರು.