ಬಂಟ್ವಾಳ : ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೇಸ್ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ ಬಿಸಿರೋಡಿನಲ್ಲಿ ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ವಿಜಯೋತ್ಸವ ನಡೆಯಿತು.
ಈ ಪಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ. ಮುಂದಿನಲೋಕಸಭಾ ಚುನಾವಣಾಯಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರ ಪಡೆಯುತ್ತೆ ಎಂದು ಅವರು ಹೇಳಿದರು.
ಬಿಜೆಪಿ ಮುಕ್ತವಾಗಿ ಮಾಡಲು ಕಾಂಗ್ರೇಸ್ ಹೆಜ್ಜೆ ಇಟ್ಟಿದೆ. ಪ್ರಾದೇಶಿಕ ಪಕ್ಷಗಳು ಕಾಂಗ್ರೇಸ್ ಜೊತೆ ಸೇರಿ ಚುನಾವಣೆ ಎದುರಿಸಲಿದೆ. ಇಂದಿರಾ ಕ್ಯಾಂಟೀನ್ ಅಗಬಾರದು ಎಂದು ವಿರೋಧ ವ್ಯಕ್ತಪಡಿಸಿದ್ದು ಯಾವ ಪ್ರಜಾಪ್ರಭುತ್ವ ಎಂದು ಟೀಕಿಸಿದರು.
ಇಂದಿರಾ ಕ್ಯಾಂಟೀನ್ ನಲ್ಲಿ ನನಗೆ ಅಪಮಾನ ಮಾಡಲಾಗಿದೆ. ನಮ್ಮ ಮೇಲೆ ಅಪಪ್ರಚಾರ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಭಾರತಿ ಶಿವಪ್ಪ ಬಂಗೇರ ಕೊಲೆ ಪ್ರಕರಣ ವನ್ನು ಅಧಿಕಾರಕ್ಕೆ ಬಂದರೆ ತನಿಖೆ ಮಾಡುತ್ತೇವೆ ಎಂದವರು ಅಧಿಕಾರಿದಲ್ಲಿರುವಾಗ ನೆನಪಿರಲಿಲ್ಬ, ಅಧಿಕಾರಕ್ಕೆ ಬೇಕಾಗಿ ಸುಳ್ಳ ಪ್ರಚಾರ ಮಾಡುತ್ತಿದೆ.
ಇಂದು ಬಿಜೆಪಿ ಮುಕ್ತ ದೇಶವಾಗಲಿದೆ ಅದಕ್ಕೆ ಎಲ್ಲಾ ರೀತಿಯ ಉತ್ತಮ ಲಕ್ಷಣಗಳು ಕಾಣುತ್ತಿವೆ ಎಂದರು. ಜನರ ನಡುವೆ ಮತೀಯ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದೆ ಎಂದರು.
ಬಂಡವಾಳ ಶಾಹಿಗಳ ಸಹಕಾರ ಪಡೆದು ಚುನಾವಣೆ ಎದುರಿಸಿದ್ದರು ಪಲಿತಾಂಶ ಅವರ ಪರ ಬರಲಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೇಸ್ ಬಲಪಡಿಸುವ ಕೆಲಸ ಆಗಬೇಕಾಗಿದೆ ಎಂದರು.