Tuesday, January 21, 2025
ಸುದ್ದಿ

ಮರ್ಧಾಳದಲ್ಲಿ ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ ಹಾಗು ಮಾಹಿತಿ ಶಿಬಿರ – ಕಹಳೆ ನ್ಯೂಸ್

ಮರ್ಧಾಳ: ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ ಹಾಗು ಮಾಹಿತಿ ಶಿಬಿರ. ದಕ್ಷಿಣ ಜಿಲ್ಲಾಪಂಚಾಯಿತ್ ಮಂಗಳೂರು, ಪಶು ಸಂಗೋಪನಾ ಮತ್ತು ವೈದಕೀಯ ಸೇವಾ ಇಲಾಖೆ ಕಡಬ, ಹಾಲು ಉತ್ಪಾದಕರ ಸಹಕಾರ ಸಂಘ ಮರ್ಧಾಳ, ವಿಜಯ ಗ್ರಾಮೀಣ ಅಭಿವೃದ್ದಿ ಸಮಿತಿ ಮರ್ಧಾಳ, ಕ್ರಷಿ ಪತ್ತಿನ ಸಹಕಾರಿ ಸಂಘ ನಿ. ಕಡಬ, ಭೂ ಅಭಿವೃದ್ದಿ ಬ್ಯಾಂಕ್ ಪುತ್ತೂರು, ಗ್ರಾಮ ಪಂಚಾಯಿತ್ ಮರ್ಧಾಳ, ಗ್ರಾಮ ಪಂಚಾಯಿತ್ ಐತೂರು ಇದರ ಸಂಯುಕ್ತ ಆಶ್ರಯದಲ್ಲಿ ಸಭಾ ಕಾರ್ಯಕ್ರಮ ಶ್ರೀ ಪಿ. ಪಿ.ವರ್ಗಿಸ್ ಜಿಲ್ಲಾ ಪಂಚಾಯಿತ್ ಸದಸ್ಯರು ದೀಪಬೆಳಗಿಸಿ ಕಾರ್ಯಕ್ರಮಕ್ಕೇ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಲತಾ ಕೆ. ಯಸ್ ಅಧ್ಯಕ್ಷರು ಗ್ರಾಮ ಪಂಚಾಯಿತ್ ಮರ್ಧಾಳ ವಹಿಸಿದರು. ಹಾಗು ಅತಿಥಿಗಳಾಗಿ ಶ್ರೀಮತಿ. ಪಿ. ವೈ.ಕುಸುಮ ತಾಲೂಕು ಪಂಚಾಯತ್ ಸದಾಸರು, ಶ್ರೀ ಸತೀಶ್ ಕೆ ಅಧ್ಯಕ್ಷರು ಐತೂರು ಗ್ರಾಮ, ಡಾ /ಎಸ್. ಮೋಹನ ಉಪನಿರ್ದೇಶಕರು ಪಶು ವೈದಕೀಯ ಸೇವಾ ಇಲಾಖೆ ಮಂಗಳೂರು, ಶ್ರೀ ರಾಜೇಂದ್ರ ರೈ ಬೆಳ್ಳಿಪಾಡಿ, ಕಾರ್ಯದರ್ಶಿ ವಿಜಯ ಗ್ರಾಮೀಣ ಅಭಿರುದ್ದಿ ಪ್ರತಿಷ್ಠಾನ ಮಂಗಳೂರು, ರಾಮಕೃಷ್ಣ ಭಟ್, ಶ್ರೀ ಸದಾಶಿವ ಆಚಾರಿ ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನ ಮಂಗಳೂರು, ಶ್ರೀ ಯಾತಿಂದ್ರ ಕೊಚ್ಚಿ ಭೂ ಅಭಿರುದ್ದಿ ಬ್ಯಾಂಕ್ ಪುತ್ತೂರು, ಶ್ರೀ ರಮೇಶ ಕಲ್ಪುರೆ ಅಧ್ಯಕ್ಷರು ಪ್ರಾ. ಕ್ರಷಿ ಪತ್ತಿನ ಸಹಕಾರಿ ಸಂಘ ಕಡಬ ಭಾಸ್ಕರ ಗೌಡ ಇಜಿಲಂಪಾಡಿ, ಇವರ ಉಪಸ್ಥಿತಿ ಯಲ್ಲಿ ಹಾಗು ಕ್ರಷಿಕರ ಸಾಧನೆ, ಸಹಕಾರದಿಂದ ಮಿಶ್ರ ತಳಿ ಹೆಣ್ಣುಕರುಗಳ ಪ್ರದರ್ಶನ ಹಾಗು ಮಾಹಿತಿ ಶಿಬಿರ. ಹಾಲು ಉತ್ಪಾದಕರ ಸಂಘದ ಮರ್ಧಾಳ ಇದರ ವಠಾರದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು