Monday, January 20, 2025
ಸುದ್ದಿ

ಛತ್ತೀಸ್‌ಗಡ ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮಕ್ಕೆ ಕ್ಷಣಗಣನೆ – ಕಹಳೆ ನ್ಯೂಸ್ –

ಛತ್ತೀಸ್‌ಗಡದಲ್ಲಿ ಆಡಳಿತಾರೂಢ ಪಕ್ಷವಾದ ಬಿಜೆಪಿ ಹಿಂದಕ್ಕೆ ಸರಿದಿದೆ. ಸುಮಾರು 15 ವರ್ಷಗಳ ಕಾಲ ಅಡಳಿತ ನಡೆಸಿ ಇಂದು ತನ್ನ ಚುಕ್ಕಾಣಿಯಿಂದ ಕೆಳಗಿಳಿಯುವಂತಿದ್ದು, 65 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.

ಮೂರು ಅವಧಿಗೆ ಮುಖ್ಯಮಂತ್ರಿಯಾದ ಬಿಜೆಪಿಯ ರಮಣ್ ಸಿಂಗ್ ಸ್ವಕ್ಷೇತ್ರದಲ್ಲಿ ಬಹುಸಮಯದವರೆಗೂ ಹಿನ್ನಡೆ ಅನುಭವಿಸಿದ್ದು, ಕಾಂಗ್ರೇಸಿಗರಲ್ಲಿ ನೀರವ ಮೌನ ಆವರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜನಾಂದಗಾಂವ್ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೋದರ ಸೊಸೆ, ಕಾಂಗ್ರೆಸ್ ಅಭ್ಯರ್ಥಿ ಕರುಣಾ ಶುಕ್ಲ ಅವರು ಸಿಎಂ ರಮಣ್ ಸಿಂಗ್‌ಗೆ ತೀವ್ರ ಪೈಪೋಟಿ ನೀಡಿದ್ದಾರೆ. ಇದೇ ಮೊದಲ ಬಾರಿಗೆ ತೀವ್ರ ಪೈಪೋಟಿಯಿಂದ ಬಿಜೆಪಿ ಹಿನ್ನಡೆ ಅನುಭವಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

90 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 68 ಸ್ಥಾನಗಳಲ್ಲಿ ಮುಂದಿದ್ದು, ಬಿಜೆಪಿ 12 ಸ್ಥಾನಗಳಲ್ಲಷ್ಟೇ ಪ್ರಾಬಲ್ಯ ಕಾಯ್ದುಕೊಂಡಿದೆ.ಇನ್ನು ಬಿ ಎಸ್ ಪಿ 4 ಹಾಗೂ ಇತರೆ 8 ಸ್ಧಾನಗಳನ್ನ ಮಾತ್ರ ಪಡೆದುಕೊಂಡಿದೆ.