Recent Posts

Monday, January 20, 2025
ಸುದ್ದಿ

ಬೆಂಗಳೂರು ರಸ್ತೆಗಳನ್ನು ಸ್ವಚ್ಛಗೊಳಿಸಲು ಮೆಕ್ಯಾನಿಕಲ್ ಸ್ವೀಪರ್ಸ್ – ಕಹಳೆ ನ್ಯೂಸ್

ಬೆಂಗಳೂರಿನ ಪ್ರಮುಖ ಸಮಸ್ಯೆಗಳೆಂದರೆ ಒಂದು ತ್ಯಾಜ್ಯ ಎರಡನೆಯದ್ದು ರಸ್ತೆಗುಂಡಿಗಳು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಬಿಬಿಎಂಪಿ ಮುಂದಾಗಿದೆ.

ಬೆಂಗಳೂರಿನ 2 ಸಾವಿರ ಕಿ.ಮೀ ರಸ್ತೆಯನ್ನು ಸ್ವಚ್ಛಗೊಳಿಸಲು ಮೆಕ್ಯಾನಿಕಲ್ ಸ್ವೀಪರ್ಸ್ಗಳು ಬರಲಿದ್ದಾರೆ. ಈ ಕುರಿತು ಒಪ್ಪಿಗೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಶೀಘ್ರ ಸ್ವೀಪರ್‌ಗಳನ್ನು ನೇಮಿಸಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರಲ್ಲಿ ಒಟ್ಟು 34 ಮೆಕ್ಯಾನಿಕಲ್ ಸ್ವೀಪರ್‌ಗಳನ್ನು ನೇಮಿಸಲಾಗುತ್ತದೆ ಅವರೊಂದಿಗೆ 17 ಮೆಕ್ಯಾನಿಕಲ್ ಮಷಿನ್ ಖರೀದಿಸಲಾಗುತ್ತದೆ. ಈ ವಾಹನದ ಜೊತೆ ಬಂದು ಎರಡು ದಿನಕ್ಕೊಮ್ಮೆಯಲ್ಲ ಪ್ರತಿನಿತ್ಯವು ತ್ಯಾಜ್ಯವನ್ನು ತೆಗೆದು ಸ್ವಚ್ಛಗೊಳಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಮೆಕ್ಯಾನಿಕಲ್ ಸ್ವೀಪರ್ಸ್ ನಿತ್ಯ 50 ಕಿ.ಮೀ ಸ್ವಚ್ಛಗೊಳಿಸಬಲ್ಲರು, ಬಿಬಿಎಂಪಿಯು ಕನಿಷ್ಠ 2 ಸಾವಿರ ಕಿ.ಮೀ ಶುಚಿಗೊಳಿಸುವ ಗುರಿ ಹೊಂದಿದ್ದು 41 ಸ್ವೀಪರ್‌ಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ.

ಪ್ರತಿ ಮಷಿನ್‌ಗೆ 70 ಲಕ್ಷ ರೂ ವೆಚ್ಚ ತಗುಲಲಿದೆ. ಕಾಂಟ್ರ‍್ಯಾಕ್ಟರ್‌ಗಳಿಗೆ 6.5 ಲಕ್ಷ ರೂ ನೀಡಬೇಕಾಗುತ್ತದೆ.ಮುಂದಿನ ವರ್ಷದೊಳಗಾಗಿ 100 ಮೆಕ್ಯಾನಿಕಲ್ ಸ್ವೀಪರ್‌ಗಳನ್ನು ನೇಮಿಸಿಕೊಂಡು 5 ಸಾವಿರ ಕಿ.ಮೀ ಸ್ವಚ್ಛಗೊಳಿಸುವ ಯೋಜನೆ ಹೊಂದಿದೆ. ಬೆಂಗಳೂರು 14,440ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ.