Recent Posts

Monday, January 20, 2025
ಸುದ್ದಿ

ಕಾಸರಗೋಡಿನ ಮಣ್ಣಿನಲ್ಲಿ ಕಂಬಳದ ಕಂಪು: – ಕಹಳೆ ನ್ಯೂಸ್

ತುಳುನಾಡಿನ ಪುರಾತನ ಜಾನಪದ ಕ್ರೀಡೆ ಎಂದೇ ಪ್ರಖ್ಯಾತಿಯನ್ನು ಪಡೆದಿರುವ ಕಂಬಳ ದಶಕದ ಬಳಿಕ ಕಾಸರಗೋಡಿನ ಪುಣ್ಯ ಮಣ್ಣಿನಲ್ಲಿ ಮಾರ್ದನಿಸತೊಡಗಿದೆ.

ಇತಿಹಾಸ ಪ್ರಸಿದ್ಧ ಕಂಬಳ, ಅನಾದಿ ಕಾಲದಿಂದಲೂ ಸಂಪ್ರದಾಯಬದ್ಧವಾಗಿ ಆರಾಧನಾತ್ಮಕವಾಗಿ ಆಚರಿಸಿಕೊಂಡು ಬರುತ್ತಿರುವ ಜೋಡುಕರೆಯಾಗಿ ಪ್ರಥಮ ವರ್ಷದ ಹೊನಲು ಬೆಳಕಿನ ಅಣ್ಣ-ತಮ್ಮ ಕಂಬಳ ಮತ್ತು ಜನಪದ ಗ್ರಾಮೀಣ ಕ್ರೀಡೆಗೆ ಪೈವಳಿಕೆ ಸಮೀಪದ ಬೋಳಂಗಳ ಸಜ್ಜಾಗಿ ನಿಂತಿದ್ದು, ಬೋಳಂಗಳ ಪರಿಸರ ಮುಂದಿನ ವರ್ಷಗಳಲ್ಲಿ ಗ್ರಾಮೀಣ ಕ್ರೀಡೆ ಹಾಗೂ ಜನಪದ ಸಂಸ್ಕೃತಿ ಜೀವಂತವಾಗಿರಿಸಲು ವೇದಿಕೆಯಾಗಿ ಗಮನ ಸೆಳೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಣ್ಣ-ತಮ್ಮ ಜೋಡುಕರೆ ಕಂಬಳ ಸಮಿತಿ ಬೋಳಂಗಳ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಇದರ ಸಹಯೋಗದಲ್ಲಿ ಡಿಸೆಂಬರ್ 13 ರಿಂದ 12 ತನಕ ತುಳುನಾಡ ಕಂಬಳ ಮತ್ತು ಗ್ರಾಮೀಣ ಮೇಳಕ್ಕೆ ಬೋಳಂಗಳ ವೇದಿಕೆಯಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

13 ರಂದು ಬೆಳಗ್ಗೆ ಪೈವಳಿಕೆಯಿಂದ ಬೋಳಂಗಲಕ್ಕೆ ವೈಭವದ ಶೋಭಾಯಾತ್ರೆ ನಡೆಯಲಿದೆ. ಬಳಿಕ ಜಾನಪದ ಕ್ರೀಡೆ ಮತ್ತು ಗ್ರಾಮೀಣ ಮೇಳ ಆಯೋಜಿಸಲಾಗಿದೆ.

14 ರಂದು ಬೆಳಗ್ಗೆ ಪ್ರಗತಿ ಬಂಧು ಒಕ್ಕೂಟಗಳ ಪದಗ್ರಹಣ ಮತ್ತು ಜ್ಞಾನಜ್ಯೋತಿ ನವಜೀವನ ಸಮಿತಿ ಉದ್ಘಾಟನೆ, ಅಪರಾಹ್ನ ಆದರ್ಶ ದಂಪತಿ ಕಾರ್ಯಕ್ರಮ, ಮಹಿಳಾ ಕಬಡ್ಡಿ ಪಂದ್ಯಾಟ ನಡೆಯಲಿದ್ದು,. 15 ರಂದು ಬೆಳಗ್ಗೆ 10 ರಿಂದ ಅಣ್ಣ-ತಮ್ಮ ಜೋಡುಕರೆ ಕಂಬಳ ನಡೆಯಲಿದೆ.