Monday, January 20, 2025
ಸುದ್ದಿ

ಪಂಚರಾಜ್ಯ ಚುನಾವಣೆ: ಮೋದಿಗೆ ಕಸಿವಿಸಿ – ಕಹಳೆ ನ್ಯೂಸ್

2019ರಲ್ಲಿ ನಡೆಯುವ ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರೋ ಪಂಚರಾಜ್ಯ ಚುನಾವಣೆಯು ಬಾರಿ ಸಂಚಲನವನ್ನೇ ಸೃಷ್ಟಿಸಿದೆ.

2014 ರ ಲೋಕಸಭಾ ಚುನಾವಣೆ ವೇಳೆ ಎಲ್ಲರ ಅಚ್ಚು ಮೆಚ್ಚಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ದೊಡ್ಡ ಹೊಡೆತ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಲೋಕಸಭೆ ಚುನಾವಣೆಯಲ್ಲಿ ಮೋದಿ ಹೋದಲ್ಲೆಲ್ಲ ಅಲೆಯಿತ್ತು. ಮೋದಿ ಪ್ರಚಾರ ಮಾಡಿದ್ದ ಕ್ಷೇತ್ರಗಳಲ್ಲಿ ಬಿಜೆಪಿ ಪಟಾಕಿ ಸಿಡಿಸಿತ್ತು. ಎಲ್ಲ ಕಡೆ ಬಿಜೆಪಿ ಗೆಲುವಿನ ನಗೆ ಬೀರಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೋದಿ ಮ್ಯಾಜಿಕ್ ಸ್ವಲ್ಪವೂ ಫಲಿಸಲಿಲ್ಲ. ಮುಖ್ಯವಾಗಿ ಬಿಜೆಪಿ ಅಲೆ ಹೆಚ್ಚಿದ್ದ ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತ್ತೀಸ್ಗಢದಲ್ಲಿಯೇ ಕಮಲ ಮುದುಡುವ ಸೂಚನೆ ಕಾಣ್ತಿದೆ.

ಬಿಜೆಪಿ ಸ್ಟಾರ್ ಪ್ರಚಾರಕರಲ್ಲಿ ಮೋದಿ ಕೂಡ ಒಬ್ಬರು. ಮೋದಿ ಈ ಮೂರು ರಾಜ್ಯಗಳಲ್ಲಿ ಅನೇಕ ರ‍್ಯಾಲಿ ನಡೆಸಿದ್ದಾರೆ. ಆದ್ರೆ ಪ್ರಚಾರ ರ‍್ಯಾಲಿ ಮತದಾರರ ಮನವೊಲಿಸುವಲ್ಲಿ ವಿಫಲವಾಗಿದ್ದು ಮೋದಿಗೆ ತಲೆಬಿಸಿಯಾಗಿರೋದು ಸತ್ಯವಾಗಿದೆ.