Recent Posts

Sunday, January 19, 2025
ಸುದ್ದಿ

ನ.2ರಂದು ಕೆಎಸ್ಸಾರ್ಟಿಸಿ ಬಸ್ ಬಂದ್!!!

 

ಬೆಂಗಳೂರು(ಅ.19): ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ವೇತನ ಹೆಚ್ಚಳ ಸೇರಿದಂತೆ ವಿವಿ‘ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿರುವ ಬೆನ್ನಲ್ಲೇ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರ ಫೆಡರೇಶನ್ ನ.2ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ವರ್ಷ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜುಲೈ 25 ರಿಂದ ಮೂರು ದಿನಗಳ ಕಾಲ ನೌಕರರು ಮುಷ್ಕರ ನಡೆಸಿದ್ದರು. ಈ ವೇಳೆ ಮಾತುಕತೆಗೆ ಮುಂದಾದ ಸರ್ಕಾರ, ಹಲವು ಸುತ್ತುಗಳ ಸಭೆ ಬಳಿಕ ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ಅದರಂತೆ ನೌಕರರ ವೇತನ ಶೇ.12.5ರಷ್ಟು ಏರಿಸಿ, ಒಂದು ತಿಂಗಳೊಳಗೆ ಉಳಿದ ಬೇಡಿಕೆ ಈಡೇ ರಿಸುವುದಾಗಿ ಆಶ್ವಾಸನೆ ನೀಡಲಾಗಿತ್ತು. ಒಂದೂವರೆ ವರ್ಷವಾದರೂ ಬೇಡಿಕೆಗಳು ಈಡೇರಿಲ್ಲ. ಹಲವು ಬಾರಿ ಆಡಳಿತ ಮಂಡಳಿ ಹಾಗೂ ಸರ್ಕಾರಕ್ಕೆ ಮನವಿ ನೀಡಿದರೂ ನಿರ್ಲಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ನ.2ರಂದು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರು ನ.2ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾ ನಿಸಲಾಗಿದೆ ಎಂದು ಸಿಐಟಿಯು ಸಂಯೋಜಿತ ಸಾರಿಗೆ ಸಂಸ್ಥೆಗಳ ನೌಕರರ ಫೆಡರೇಶನ್ ರಾಜ್ಯಾ‘ಧ್ಯಕ್ಷ ಎಚ್.ಡಿ.ರೇವಪ್ಪ ತಿಳಿಸಿದರು. ಮುಷ್ಕರದಿಂದ ಬಸ್ ಸಂಚಾರ ಸ್ಥಗಿತ ಗೊಂಡರೆ ಸರ್ಕಾರವೇ ಹೊಣೆ. ನ.2ರಿಂದ ಎಲ್ಲ ನೌಕರರು ಶಾಂತಿನಗರದ ಕೆಎಸ್‌ಆರ್’ಟಿಸಿ ಕೇಂದ್ರ ಕಚೇರಿ ಎದುರು ಮುಷ್ಕರಕ್ಕೆ ಕೂರಲಾಗುವುದು ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

Leave a Response