Friday, September 20, 2024
ಸುದ್ದಿ

ಕುಕ್ಕೆಯಲ್ಲಿ ಉರುಳು ಸೇವೆ ಮಾಡಿ ದೇವರ ಕೃಪೆಗೆ ಪಾತ್ರನಾದ ಭಕ್ತ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ತನ್ನ ಎಲ್ಲಾ ಕಷ್ಟ ಪರಿಹಾರಕ್ಕಾಗಿ ಮಡೆಸ್ನಾನ ಮಾಡ್ತಾ ಇರೋ ವ್ಯಕ್ತಿ, ಇಷ್ಟಾರ್ಥ ಸಿದ್ಧಿಗಾಗಿ ಕುಮಾರ ಸ್ನಾನ. ಎರಡು ಕಿಲೋ ಮೀಟರ್‌ವರೆಗೆ ಉರುಳು ಸೇವೆ. ಬಳಿಕ ದೇವರ ದರ್ಶನ ಪಡೆದ ಭಕ್ತ. ಈ ದೃಶ್ಯ ಕಂಡು ಬಂದಿದ್ದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ.

ಕುಕ್ಕೇ ಸುಬ್ರಮಣ್ಯದಲ್ಲಿ ಪ್ರತಿ ವರ್ಷದಂತೆ ಚಂಪಾಷಷ್ಠಿ ಉತ್ಸವದ ಸಂಭ್ರಮ. ಶ್ರೀ ದೇವರ ಭಕ್ತರು ಹೇಳಿಕೊಳ್ಳುವ ಹರಿಕೆ, ಸೇವೆಗಳಲ್ಲಿ ಬೀದಿ ಮಡೆ ಸ್ನಾನವೂ ಒಂದು. ಶ್ರೀ ಸುಬ್ರಮಣ್ಯ ದೇವರಿಗೆ ಅನಾದಿಕಾಲದಿಂದಲೂ ಸಮರ್ಪಣೆ ಮಾಡುವ ಪದ್ದತಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಕುಮಾರಧಾರ ನದಿಯಲ್ಲಿ ತೀರ್ಥಸ್ನಾನ ಮಾಡಿ ಅಲ್ಲಿಂದ ಎರಡು ಕಿಲೋಮೀಟರ್‌ವರೆಗೆ ನೂರಾರು ಭಕ್ತರು ಉರುಳಿಕೊಂಡು ಬಂದು ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಮಾಡುವ ಮೂಲಕ ತಮ್ಮ ತಮ್ಮ ಭಕ್ತಿಯನ್ನು ಭಗವಂತನಿಗೆ ಸಮರ್ಪಣೆ ಮಾಡಿ ಪುಣ್ಯ ಸಂಪಾದನೆ ಮಾಡುವ ಈ ದ್ರಶ್ಯ ಕಂಡುಬರುತ್ತದೆ.

ಶ್ರೀ ಕುಕ್ಕೇ ಸಬ್ರಹ್ಮಣ್ಯ ಚಂಪಾ ಷಷ್ಠಿ ಉತ್ಸವ ಸಂದರ್ಭದಲ್ಲಿ ಕಂಡು ಬರುವ ಹರಿಕೆ, ಸೇವೆಗಳಲ್ಲಿ ಕಷ್ಟಕರವಾದ ಹರಿಕೆ ಸೇವೆ ಎಂದ್ರೆ ಮಡೆಸ್ನಾನ. ಅಂತೆಯೇ ರವೀಂದ್ರ ಭಟ್ ಕೋಡಿಕಲ್ ಮಂಗಳೂರು ತಮ್ಮ ಎಲ್ಲ ಕಷ್ಟ ಪರಿಹಕ್ಕಾಗಿ ಇಷ್ಟಾರ್ಥ ಸಿದ್ದಿಗಾಗಿ ಕುಮಾರಧಾರ ತೀರ್ಥ ಸ್ನಾನ ಮಾಡಿ ಅಲ್ಲಿಂದ ಎರಡು ಕಿಲೋಮೀಟರ್ ವರೆಗೆ ಉರುಳು ಸೇವೆಮಾಡಿ ಶ್ರೀ ದೇವರ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾಗಿದ್ದಾರೆ.