Recent Posts

Monday, January 20, 2025
ಸುದ್ದಿ

ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಪ್ರತಾಪ ಚಂದ್ರ ಶೆಟ್ಟಿ ಆಯ್ಕೆ – ಕಹಳೆ ನ್ಯೂಸ್

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಆಯ್ಕೆಯಾಗಿರುವ ಪ್ರತಾಪ ಚಂದ್ರ ಶೆಟ್ಟಿಯವರು ಪ್ರಸ್ತುತ ಉಭಯ ಸದನಗಳಲ್ಲಿಯೇ ಅತ್ಯಂತ ಹಿರಿಯ ಸದಸ್ಯರು. ಸದಾಕಾಲ ಜನಪರ ಚಿಂತನೆಗಳನ್ನೇ ಯೋಚಿಸಿ ಅವುಗಳ ಕಾರ್ಯರೂಪಕ್ಕಾಗಿ ಶ್ರಮಿಸುತ್ತಿರುವ ನೈಜ ಜನಪ್ರತಿನಿಧಿಯಾಗಿರುವ ಪ್ರತಾಪ್ ಸಾಮಜಿಕವಾಗಿ ಏನಾದರೊಂದು ಉತ್ತಮ ಕೆಲಸ ಮಾಡ್ಬೇಕು ಅನ್ನುವ ಅಚಲ ಆಸೆಯನ್ನಿಟ್ಟುಕೊಂಡಿರುವವರು.

ದಿವಂಗತ ಹುಯ್ಯಾರು ಪಟೇಲ್ ಹಿರಿಯಣ್ಣ ಶೆಟ್ಟಿ ಮತ್ತು ದಿವಂಗತ ಕೊಳ್ಕೆಬೈಲು ಗುಲಾಬಿ ಶೆಟ್ಟಿಯವರ ಹೆಮ್ಮೆಯ ಮಗ ಪ್ರತಾಪ ಚಂದ್ರ ಶೆಟ್ಟಿಯವರು. ಬಿ.ಎ ಪದವಿ ಮುಗಿದ ತಕ್ಷಣ ವಿಜಯ ಬ್ಯಾಂಕ್ ಉದ್ಯೋಗಿಯಾಗಿ ಪೂನಾ ಹಾಗೂ ಶಿವಮೊಗ್ಗಾದಲ್ಲಿ ಸೇವೆ ಸಲ್ಲಿಸಿದ್ರು. ಆದ್ರೆ ಪ್ರೀತಿಯ ತಂದೆ ನಿಧನರಾದ ಮೇಲೆ ಅದೇ ಬ್ಯಾಂಕ್ ಉದ್ಯೋಗವನ್ನು ತ್ಯಜಿಸಿ ಮುಂದೆ ಕೃಷಿ ಕ್ಷೇತ್ರದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡ್ರು.

ಜಾಹೀರಾತು
ಜಾಹೀರಾತು
ಜಾಹೀರಾತು

1983 ರಿಂದ 1999ರವರೆಗೆ ನಾಲ್ಕು ಭಾರಿ ಕುಂದಾಪುರ ಶಾಸಕರಾಗಿದ್ದ ಪ್ರತಾಪ್ ಚಂದ್ರ ಶೆಟ್ಟಿ, 2003 ರಿಂದ ಇಲ್ಲಿಯವರೆಗೆ ಮೂರು ಭಾರಿ ದ.ಕ ಉಡುಪಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯರು ಆಗಿದ್ದವರು. ಅತ್ಯಂತ ಸರಳ ಸಜ್ಜನ ಈ ವ್ಯಕ್ತಿತ್ವ ಇನ್ನೂ ಹಲವಾರು ಜವಾಬ್ದಾರಿಯುತ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಇದೇ ಮೇರು ವ್ಯಕ್ತಿ ಚಿಂತಕರ ಚಾವಡಿಯಾದ ವಿಧಾನ ಪರಿಷತ್‌ನ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಈ ವಿಷಯ ಎಲ್ಲಾ ಕನ್ನಡಿಗರಿಗೂ ಹೆಮ್ಮೆಯ ಸಂಗತಿ. ಹೆಮ್ಮೆಯ 1983 ರಿಂದ ಇಲ್ಲಿಯವರೆಗಿನ ಅವರ ಜೀವನದ ಹೆಜ್ಜೆಗಳನ್ನು ಬಲ್ಲವರು ಅವರ ವ್ಯಕ್ತಿತ್ವವನ್ನು ಗೌರವಿಸುತ್ತಲೇ ಇದ್ದಾರೆ. ಇವರಿಗೆ ನಮ್ಮೆಲ್ಲರ ಕಡೆಯಿಂದ ಹೃದಯ ತುಂಬಿದ ಧನ್ಯವಾದಗಳು.