ಸಾರಿಗೆ ಬಸ್ಸೊಂದು ಚಲಿಸುತ್ತಿರುವಾಗಲೇ ಬಸ್ಸಿನ ಹಿಂಬದಿ ಗಾಲಿಗಳು ಕಳಚಿ ಅಪಘಾತಕ್ಕೀಡಾದ ಘಟನೆ ಸಿಂಧಗಿ ಪಟ್ಟಣದ ಅಗ್ನಿ ಶಾಮ ಠಾಣೆ ಬಳಿ ನಡೆದಿದೆ.
ಸಾರಿಗೆ ಬಸ್ಸಿನಲ್ಲಿ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ಇತರೆ ಪ್ರಯಾಣಿಕರಿದ್ದು, ಸಿಂಧಗಿ ತಾಲೂಕಿನ ಬೋರಗಿಯಿದ ಸಿಂದಗಿಯತ್ತ ಹೊರಟ್ಟಿದ್ದಾಗ ಇದ್ದಕ್ಕಿದ್ದಂತೆ ಹಿಂಬದಿಯ ಎರಡು ಚಕ್ರಗಳು ಕಳಚಿಕೊಂಡವು.
ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಇನ್ನು ಸಾರಿಗೆ ಬಸ್ ಘಟಕ ವ್ಯವಸ್ಥಾಪಕರಿಗೆ ಹಲವು ಬಾರಿ ಮನವಿ ಮಾಡಿದರೂ ಸಂಚಾರ ಯೋಗ್ಯ ಬಸ್ಸುಗಳನ್ನು ಕೊಟ್ಟಿಲ್ಲ.
ರಾಜ್ಯದ ಹಲವೆಡೆ ದುರಂತಗಳು ನಡೆದಿದ್ದರೂ ಇಲ್ಲಿನವರು ಮಾತ್ರ ಎಚ್ಚೆತ್ತುಕೊಂಡಿಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.