ನವದೆಹಲಿ: ಕಳೆದ ಏಪ್ರಿಲ್ ನಿಂದ ಜಿಎಸ್ ಟಿ ತೆರಿಗೆ ವಂಚನೆ ಪತ್ತೆ ಹಚ್ಚಲಾಗಿದ್ದು, ಈ ವೇಳೆ 12 ಸಾವಿರ ಕೋಟಿ ರೂ. ವಂಚನೆ ಪತ್ತೆಯಾಗಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಸಿಬಿಐಸಿ ತಿಳಿಸಿದೆ.
ಇ-ವೇ ಬಿಲ್ ವ್ಯವಸ್ಥೆ ಜಾರಿಯಾಗಿದ್ದರೂ, ಜಿಎಸ್ ಟಿ ವಂಚನೆ ಮುಂದುವರೆದಿದೆ ಎಂದು ಸಿಬಿಐಸಿಯ ಸದಸ್ಯ ಜಾನ್ ಜೋಸೆಫ್ ತಿಳಿಸಿದ್ದಾರೆ.
ಏಪ್ರಿಲ್ ನಿಂದ ಜಿಎಸ್ ಟಿ ತೆರಿಗೆ ವಂಚನೆ ಪತ್ತೆ ಹಚ್ಚಲಾಗಿದ್ದು, ಈ ವೇಳೆ 12 ಸಾವಿರ ಕೋಟಿ ರೂ. ವಂಚನೆ ಪತ್ತೆಯಾಗಿದೆ ಹಾಗಾಗಿ ಜಿಎಸ್ ಟಿ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಣೆಗೆ ಒಳಪಡಿಸಬೇಕಾದ ಅಗತ್ಯ ಇದೆ ಎಂದು ಅವರು ಹೇಳಿದ್ದಾರೆ.
ಒಟ್ಟು 12 ಕೋಟಿ ಜಿಎಸ್ ಟಿ ತೆರಿಗೆದಾರರಲ್ಲಿ ಕೇವಲ ಶೇ. 5-10 ಮಂದಿ ಜಿಎಸ್ ಟಿ ವಂಚಿಸುತ್ತಿದ್ದಾರೆ. ಹೀಗಿದ್ದರೂ ಅವರಿಂದ ಉದ್ಯಮ ವಲಯಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಜೋಸೆಫ್ ಹೇಳಿದರು.