Thursday, April 10, 2025
ಸುದ್ದಿ

ರಾಘವೇಶ್ವರ ಶ್ರೀಗೆ ಭರ್ಜರಿ ದೀಪಾವಳಿ ಗಿಫ್ಟ್ | ಶ್ರೀಗಳು ದೋಶ ಮುಕ್ತ.

ಬೆಂಗಳೂರು : ಅತ್ಯಾಚಾರ ಆರೋಪ ಎದುರಿಸುತ್ತಿದ್ದ ರಾಘವೇಶ್ವರ ಭಾರತೀ ಸ್ವಾಮೀಜಿಯವರ ವಿರುದ್ಧ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಶಾಂತ್ ಮತ್ತು ಲೋಕೇಶ್ ಎಂಬುವವರು ಅಕ್ರಮ ಸಂಬಂಧದ ಹಿನ್ನಲೆಯಲ್ಲಿ ಶ್ರೀಗಳು ಪೀಠದಲ್ಲಿ ಮುಂದುವರಿಯುದು ಸರಿಯಲ್ಲ. ಕೂಡಲೇ ಮಠಕ್ಕೆ ಆಡಳಿತಾಧಿಕಾರಿ ನೇಮಿಸಬೇಕೆಂದು ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ರಾಘವೇಶ್ವರ ಶ್ರೀಗಳನ್ನು ದೋಶಮುಕ್ತಗೊಳಿಸಿ ಆದೇಶ ಹೊರಡಿಸಿದೆ. ಶ್ರೀಗಳ ಮೇಲಿರುವ ಯಾವುದೇ ಆರೋಪಗಳಿಗೆ ಹುರುಳಿಲ್ಲ ಎಲ್ಲವೂ ದುರುದ್ದೇಶಪೂರಿತ ಆದ್ದರಿಂದ ಇದು ವಿಚಾರಣಾಯೋಗ್ಯ ಪ್ರಕರಣವಲ್ಲ ಎಂದು ನ್ಯಾಯಾಲಯವು ಪರಿಗಣಿಸಿ ಪ್ರಕರಣವನ್ನು ತಳ್ಳಿಹಾಕಿದೆ. ದೀಪಾವಳಿಯ ಈ ಸಂದರ್ಭದಲ್ಲಿ ಶ್ರೀಗಳಿಗೆ ನ್ಯಾಯಾಲಯವು ಭರ್ಜರಿ ಗಿಫ್ಟ್ ನೀಡಿದಂತಾಗಿದೆ. ಈಗ ಶ್ರೀಗಳು ಎಲ್ಲಾ ಆರೋಪದಿಂದ ಮುಕ್ತರಾಗಿರುವುದು ಭಕ್ತರಲ್ಲಿ ಸಂತಸ ಮೂಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ