Recent Posts

Tuesday, January 21, 2025
ಸುದ್ದಿ

ಎಲ್ಲ ದೇವರ ಜಾತಿಯನ್ನೂ ಬಹಿರಂಗಪಡಿಸಿ: ಆದಿತ್ಯನಾಥ್ ಹೇಳಿಕೆಗೆ ಅಖಿಲೇಶ್ ಯಾದವ್ ತಿರುಗೇಟು – ಕಹಳೆ ನ್ಯೂಸ್

ಹನುಮಂತ ದಲಿತ ಎಂದು ಹೇಳಿಕೆ ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಲೇವಡಿ ಮಾಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಇತರ ದೇವರ ಜಾತಿಯನ್ನೂ ಬಹಿರಂಗಪಡಿಸಿ ಎಂದು ಕೆಣಕಿದ್ದಾರೆ.

ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಮಾತನಾಡಿದ ಆದಿತ್ಯನಾಥ್, ಹನುಮಾನ್ ಅರಣ್ಯವಾಸಿ, ಸೌಲಭ್ಯ ವಂಚಿತ ಹಾಗೂ ದಲಿತ ಎಂದು ಹೇಳಿದ್ದರು. ಈ ಹೇಳಿಕೆ ವಿವಾದವನ್ನು ಸೃಷ್ಟಿಸಿದ್ರೂ ಕೂಡ ಈಗ ಮತ್ತೆ ಈ ಹೇಳಿಕೆ ಸದ್ದು ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

“ಬಜರಂಗ ಬಲಿ ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ಭಾಗಗಳ ಎಲ್ಲ ಭಾರತೀಯ ಸಮುದಾಯಗಳನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದರು” ಎಂದು ಹೇಳಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದಿತ್ಯನಾಥ್ ಹೇಳಿಕೆಗೆ ಅಣಕವಾಡಿರುವ ಅಖಿಲೇಶ್, “ಕೆಲ ದೇವರ ಜಾತಿಯನ್ನಷ್ಟೇ ಬಹಿರಂಗಪಡಿಸಿದ್ದೀರಿ. ಆದರೆ ಎಲ್ಲ ದೇವರ ಜಾತಿ ಬಹಿರಂಗಪಡಿಸಿದರೆ ಒಳ್ಳೆಯದು. ನಾನು ಕೂಡಾ ನನ್ನ ಜಾತಿಯ ದೇವರನ್ನು ಪೂಜಿಸುತ್ತೇನೆ” ಎಂದು ಚುಚ್ಚಿದ್ದಾರೆ.